ಮಹಿಳೆಯರು ಜೀವನದಲ್ಲಿ ಸಫಲತೆ ಕಾಣಿ
ಕ.ಪ್ರ.ವಾರ್ತೆ, ತರೀಕೆರೆ. ಏ.2
ಮಹಿಳೆಯರು ಜೀವನದಲ್ಲಿ ಸಫಲತೆ ಕಾಣಬೇಕು ಎಂದು ತರೀಕೆರೆ ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ತಿಳಿಸಿದ್ದಾರೆ.
ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ವೇದಿಕೆಯಿಂದ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಮತ್ತು ಲೈಂಗಿಕ ಕಿರುಕುಳ ತಡೆ ಉಪನ್ಯಾಸ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯು ಬಂಗಾರದ ಜೀವನ. ಹೆಣ್ಣುಮಕ್ಕಳಿಗಾಗಿ ಸರ್ಕಾರ ಹಲವು ರೀತಿಯ ಸವಲತ್ತು ಪ್ರಕಟಿಸಿದೆ. ಪುರಸಭೆ ವತಿಯಿಂದಲೂ ಅನೇಕ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಗಳ ಸದುಪಯೋಗ ಪಡೆಯಬೇಕು. ಐ.ಎ.ಎಸ್. ಇತ್ಯಾದಿ ಹಲವು ಪರೀಕ್ಷೆಗಳಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಬೇಕು ಎಂದು ಅವರು ತಿಳಿಸಿದರು.
ಅರಿವಿನ ಆಂದೋಲನ: ತಾಲೂಕು ವೈದ್ಯಾಧಿಕಾರಿ ಡಾ. ಗಣೇಶ್ ಅವರು ಲೈಂಗಿಕ ಕಿರುಕುಳ ತಡೆ ಕುರಿತು ಮಾತನಾಡಿ, ಶಿಕ್ಷಣದಿಂದ ಅರಿವಿನ ಆಂದೋಲನ ಉಂಟಾಗುತ್ತದೆ. ಮಹಿಳೆಯರು ಜಾಗೃತರಾಗಬೇಕು. ಲೈಂಗಿಕ ಕಿರುಕುಳ ತೆಡೆಯಲು ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ವಿಚಾರದಲ್ಲಿ ಅರಿವು ಮತ್ತು ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯರಾದ ಅಲಿಸ್ ಡಿಕಾಸ್ಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಡಾ. ಲತಾಕುಮಾರಿ, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
--