ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ
ಮೂಡಿಗೆರೆ: ವಿಧಾನ ಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಕಾಂಗ್ರೆಸ್ನಿಂದ ಬಿ.ಎನ್. ಚಂದ್ರಪ್ಪರಿಗೆ ಟಿಕೆಟ್ ದೊರೆತಿದ್ದು, ಸ್ಥಳಿಯ ಕಾಂಗ್ರೆಸ್ ವಲಯದಲ್ಲಿ ಅಸಮಧಾನ ಬುಗಿಲೆದ್ದಿದೆ. ಸ್ಥಳಿಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಬಾರಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮತ್ತು ವಿ.ಪ. ಸದಸ್ಯೆ ಮೋಟಮ್ಮ ಟಿಕೆಟ್ ಆಕಾಂಕ್ಷಿಯಾಗಿದ್ದು, ಇಬ್ಬರನ್ನು ಕೈ ಬಿಟ್ಟು ಬಿ.ಎನ್. ಚಂದ್ರಪ್ಪನವರಿಗೆ ಟಿಕೆಟ್ ನೀಡಿದ್ದು ಸರಿಯಲ್ಲ. ತಕ್ಷಣ ಬಿ.ಎನ್. ಚಂದ್ರಪ್ಪನವರ ಟಿಕೆಟ್ ರದ್ದು ಪಡೆಸಿ ಬಿ.ಬಿ.ನಿಂಗಯ್ಯ ಅಥವಾ ಮೋಟಮ್ಮನವರಿಗೆ ಟಿಕೆಟ್ ನೀಡಿದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ತಪ್ಪಿದಲ್ಲಿ ಒಂಬತ್ತು ಹೋಬಳಿಯ ಅಧ್ಯಕ್ಷರು ಮತ್ತು ಸದಸ್ಯರು ಸಾಮೂಹಿಕ ರಾಜಿನಾಮೆ ಸಲ್ಲಿಸುವುದಾಗಿ ಕೆಪಿಸಿಸಿಗೆ ಎಚ್ಚರಿಕೆ ನೀಡಿದರು.
ಪಕ್ಷದ ಎಂ.ಎಂ. ಲಕ್ಷ್ಮಣಗೌಡ, ಬಿ.ಎಂ. ಆದರ್ಶ, ತಾಪಂ ಸದಸ್ಯ ಸುಬ್ರಾಯಗೌಡ(ಪಾಪಣ್ಣ), ಕೆ.ಆರ್. ಮಹೇಶ್, ಲೋಕಪ್ಪ, ಬಿ.ಎಸ್. ಜಯರಾಮ್, ಹವಳ್ಳಿ ಕೃಷ್ಣೇಗೌಡ, ಒ.ಎಸ್. ಗೋಪಾಲಗೌಡ, ಕಟಾರದಹಳ್ಳಿ ಮಂಜುನಾಥ್, ಸಂದರೇಶ್, ಶಾಮಣ್ಣ, ಕೆ.ಟಿ. ಮಂಜುನಾಥ್ ಗೌಡ, ರಾಜಮ್ಮ, ಪುಟ್ಟಸ್ವಾಮೇಗೌಡ, ಉದಯ್ ಮೊದಲಾದವರು ಇದ್ದರು.