ಮತದಾನದ ಅರಿವಿಗೆ ಜಾಗೃತಿ ಶಿಬಿರ
ಕ.ಪ್ರ.ವಾರ್ತೆ, ಕಡೂರು, ಏ.3
ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಡೂರು ಪಟ್ಟಣದಲ್ಲಿ ಸ್ವೀಪ್ ಸಮಿತಿಯಿಂದ ಜಾಗೃತಿ ಶಿಬಿರ ನಡೆಸಲಾಯಿತು.
ಶಿಬಿರದ ಅಂಗವಾಗಿ ಕಡೂರು ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಿಂದ ಚುನಾವಣಾ ಆರ್.ಒ. ಗಳಾದ ಲಕ್ಷ್ಮೀನರಸಿಂಹಯ್ಯ, ತಹಸೀಲ್ದಾರ್ ಲಕ್ಷ್ಮಣಪ್ಪ, ತಾಲೂಕು ವೈದ್ಯಾಧಿಕಾರಿ ಎಸ್.ಕೆ.ಪ್ರಭು, ಜಿಪಂ ಸಹಾಯಕ ಎಕ್ಸಿಕ್ಯುಟೀವ್ ಎಂಜಿನಿಯರ್ ಪ್ರಭಾಕರರಾವ್ ಮೊದಲಾದರ ನೇತೃತ್ವದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬೂತ್ ಮಟ್ಟದ ಸಿಬ್ಬಂದಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಮತದಾನ ಜಾಗೃತಿ ಶಿಬಿರದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವಿವಿಧ ಘೋಷಣೆ: ತಾಲೂಕು ಕಚೇರಿಯಿಂದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಹೊರಟ ಮೆರವಣಿಗೆಯಲ್ಲಿ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಾಗುವ ಮೂಲಕ ಮೆರವಣಿಗೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಘೋಷಣೆ ಕೂಗುತ್ತಾ ಸಾಗಿದ ಮೆರಣಿಗೆ ಕೆ.ಎಲ್.ವಿ. ವೃತ್ತಕ್ಕೆ ಸಾಗಿ ನಂತರ ಮರವಂಜಿ ವೃತ್ತದಿಂದ ಚೆಕ್ ಪೋಸ್ಟ್ನ ಬಸವೇಶ್ವರ ವೃತ್ತದವರೆಗೆ ತೆರಳಿತು.
ಆನಂತರ ದೇವರಾಜ ಅರಸು ರಸ್ತೆಯಿಂದ ಸಾಗಿದ ಜಾಗೃತಿ ಮೆರವಣಿಗೆ ಅನ್ನಪೂರ್ಣ ಚಿತ್ರಮಂದಿರದಲ್ಲಿ ಸಮಾವೇಶಗೊಂಡಿತು.
ಸ್ವೀಪ್ನ ತಾಲೂಕು ಸಮಿತಿ ಅಧ್ಯಕ್ಷ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ. ಮೂರ್ತಿ, ಸದಸ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಓಂಕಾರಪ್ಪ, ವೃತ್ತ ನಿರೀಕ್ಷಕ ಬಾಲಚಂದ್ರೇಗೌಡ, ಸಬ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.