ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗವಿಕಲ ಶಾಲಾ ಮಕ್ಕಳಿಗೆ ಕಚ್ಚಿದ ಹೆಜ್ಜೇನು

Lingaraj Badiger
Updated On : 5 Apr 2013, 10:41 am

ಕ.ಪ್ರ ವಾರ್ತೆ, ಮೂಡಿಗೆರೆ, ಏ.4
ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿದಾನಕ್ಕೆ ಭಕ್ತಾದಿಗಳಾಗಿ ಬಂದಿದ್ದ ಅಂಗವಿಕಲ ಶಾಲಾ ಮಕ್ಕಳಿಗೆ ಹೆಜ್ಜೇನು ಕಚ್ಚಿ ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಹುಬ್ಬಳ್ಳಿಯ ವಿಶ್ವಧರ್ಮ ಅಂಗವಿಕಲ ಶಾಲೆಯ ಸುಮಾರು 43 ಮಕ್ಕಳು ಗುರುವಾರ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ದೇವಾಸ್ಥಾನದ ಮೆಟ್ಟಿಲ ಮೇಲೆ ಕುಳಿತಿದ್ದರು. ಈ ಸಂದರ್ಭ ದೇವಸ್ಥಾನದ ಬಳಿ ಗೂಡು ಕಟ್ಟಿ ಕುಳಿತಿದ್ದ ಹೆಜ್ಜೇನುಗಳ ಗೂಡಿಗೆ ಹಕ್ಕಿಯೊಂದು ದಾಳಿ ಮಾಡಿದೆ ಎನ್ನಲಾಗಿದೆ. ಆಗ ಹೆಜ್ಜೇನುಗಳು ಏಕಾಏಕಿ ಅಂಗವಿಕಲ ಮಕ್ಕಳ ಮೇಲೆ ದಾಳಿ ನಡೆಸಿದೆ. ಸ್ಥಳೀಯರು ಹಾಗೂ ಭಕ್ತಾದಿಗಳ ಮೇಲೆ ಜೇನು ನೊಣಗಳು ದಾಳಿ ಮಾಡಿದೆ. ಈ ಸಂದರ್ಭ ಕೆಲವರು ಓಡಿ ತಪ್ಪಿಸಿಕೊಂಡರೆ ಇನ್ನು ಕೆಲವರು ಕಂಬಳಿ, ಬೆಡ್‌ಶೀಟ್ ಮುಂತಾದವುಗಳಿಂದ ರಕ್ಷಣೆ ಪಡೆದರು.
ರಕ್ಷಿಸಿದ ನೌಕರರು: ಆದರೆ ಅಂಗವಿಕಲ ಮಕ್ಕಳಿಗೆ ಮಾತ್ರ ಎಲ್ಲೂ ಹೋಗಲು ಆಗಲಿಲ್ಲ. ಆದ್ದರಿಂದ ಈ ಮಕ್ಕಳಿಗೆ ಹೆಚ್ಚಿನ  ಗಾಯಗಳಾಗಿದೆ. ಆದರೂ ಆ ಸಂದರ್ಭ ಹೊರನಾಡಿನ ದೇವಾಸ್ಥಾನದ ನೌಕರರು ಕೆಲ ಮಕ್ಕಳನ್ನು ರಕ್ಷಿಸಿದರು. ಇಲ್ಲವಾದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾನಿಯಾಗುತ್ತಿತ್ತು ಎನ್ನಲಾಗಿದೆ.
ತಕ್ಷಣ ಕಳಸದ 108 ಹಾಗೂ ಸ್ಥಳೀಯ ವಾಹನದ ಮೂಲಕ ಕಳಸದ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಮಕ್ಕಳನ್ನು ಸೇರಿಸಲಾಯಿತು. ಸುಮಾರು 43 ಮಕ್ಕಳಿಗೆ ಜೇನು ನೊಣ ಕಚ್ಚಿದೆಯಾದರೂ 22 ಮಕ್ಕಳಿಗೆ  ಹೆಚ್ಚಿಗೆ ಗಾಯಗಳಾಗಿದೆ. 3 ಮಕ್ಕಳಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ.
ಮಕ್ಕಳಿಗೆ ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಯಿತು. ಸ್ಥಳೀಯರಿಗೂ ಹೆಚ್ಚಿನ ರೀತಿಯಲ್ಲಿ ಜೇನು ನೊಣದ ಕಡಿತಕ್ಕೆ ಒಳಗಾಗಿ ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಾದರು. ಮಕ್ಕಳು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡ ಮೇಲೆ ತಮ್ಮ ಊರಿನ ಕಡೆ ಪ್ರಯಾಣ ಬೆಳೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement