ಮತದಾನ ಕುರಿತ ಆಂದೋಲನ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.4
ಉತ್ತಮ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಸುಶಿಕ್ಷಿತರು, ಯುವಕರು ಮತದಾನ ಮಾಡಬೇಕು. “ÈÚß}ÚVÚmæoVæ ಬನ್ನಿ, ಬದಲಾವಣೆ }Ú¬’ ಎಂದು ಎಂಎಲ್ಯುಎಂಎನ್ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಜಿ.ಎಂ. ಗಣೇಶ್ ಹೇಳಿದ್ದಾರೆ.
ನಗರದ ಮೌಂಟ್ ವ್ಯೂ ಪದವಿ ಕಾಲೇಜಿನಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ ಕುರಿತ ಆಂದೋಲನದಲ್ಲಿ ಅವರು ಮಾತನಾಡಿದರು.
ಜಾಗೃತ ಮತದಾರರಿಂದ ಸದೃಢ ಸರ್ಕಾರ ಸಾಧ್ಯ. ಮತದಾನ ದೇಶದ ಹಿತ ಕಾಯುತ್ತದೆ. ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಟ ಆಡಳಿತ ವ್ಯವಸ್ಥೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳು ಅಸ್ತಿತ್ವದಲ್ಲಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಒಳ್ಳೆಯ ಸರ್ಕಾರ ಕಟ್ಟಬಹುದೆಂಬ ಅರಿವು ಜಾಗೃತಗೊಳ್ಳಬೇಕು. ಮತ ಚಲಾಯಿಸದಿರುವುದು ನಾವೇ ಒಪ್ಪಿಕೊಂಡ ವ್ಯವಸ್ಥೆಗೆ ಮಾಡಿದ ದ್ರೋಹ. ದೇಶದಲ್ಲಿ ಸರಾಸರಿ ಶೇ.60ರಷ್ಟು ಮತದಾನ ನೋಂದಾವಣಿ ಪಟ್ಟಿಯಂತೆ ಆಗುತ್ತಿದೆ. ಶೇ. 40ರಷ್ಟು ಜನ ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿಯುತ್ತಿರುವುದು ದುರದೃಷ್ಟಕರ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಟಿ.ಎಂ. ದೇವಿಕಾ ಮಾತನಾಡಿ, ಮತದಾನ ಪವಿತ್ರ ಹಕ್ಕು. ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ವಿವೇಚನೆಯಿಂದ ಮಾಡಬೇಕು ಎಂದು ಹೇಳಿದರು.
ಹೆಸರು ನೋಂದಣಿಗೆ ಅವಕಾಶ: ಪ್ರೌಢಶಾಲಾ ಶಿಕ್ಷಕ ಎಚ್.ಎಂ. ಓಂಕಾರಪ್ಪ ಮಾತನಾಡಿ, 2013ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಚುನಾವಣಾ ಗುರುತಿನಚೀಟಿ ಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಸಂಪನ್ಮೂಲ ಶಿಕ್ಷಕ ಕೆ.ಜಿ. ನೀಲಂಠಪ್ಪ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣಿಗೆ ರೇಷನ್ಕಾರ್ಡ್, ಆಧಾರ್ ಇತರೆ ವಾಸಸ್ಥಳ ವಿಳಾಸದ ದೃಢೀಕರಣ ಹಾಗೂ ವಯಸ್ಸಿನ ದೃಢೀಕರಣದೊಂದಿಗೆ ನಮೂನೆ- 6 ಅರ್ಜಿಯನ್ನು ಬಿ.ಎಲ್.ಓಗಳಿಗೆ ಸಲ್ಲಿಸಬಹುದು. ವೆಬ್ಸೈಟ್ ಮೂಲಕ ಆನ್ಲೈನ್ ಅಪ್ಲಿಕೇಷನ್ ಅಪ್ಲೋಡ್ ಮಾಡಬಹುದೆಂದರು.
ಸುಭದ್ರ ಸರ್ಕಾರ ರಚನೆಯಲ್ಲಿ ಯುವ ಜನರ ಪಾತ್ರ ಕುರಿತಂತೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ಆಯೇಷಾ ಬೇಗಂ, ರಕ್ಷಿತಾ ಅನುಕ್ರಮವಾಗಿ ಬಹುಮಾನ ಗಳಿಸಿದರು.