ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲಕ್ಷ್ಮೀಸೇನರ ಆಡಳಿತದಲ್ಲಿ ಧರ್ಮ ಸಾಮ್ರಾಜ್ಯ

Lingaraj Badiger
Updated On : 5 Apr 2013, 10:40 am

ಕ.ಪ್ರ ವಾರ್ತೆ, ನರಸಿಂಹರಾಜಪುರ, ಏ.4
ದೇಶವು ಲಕ್ಷ್ಮೀಸೇನರ ಆಡಳಿತದಲ್ಲಿ ಧರ್ಮ ಸಾಮ್ರಾಜ್ಯ ಹೊಂದಿತ್ತು ಎಂದು ನಗರ ಯೋಜನೆಯ ನಿವೃತ್ತ ನಿರ್ದೇಶಕ ಮೈಸೂರಿನ ಎ.ಎನ್. ಚಂದ್ರಕೀರ್ತಿ ತಿಳಿಸಿದರು.
ಅವರು ಬುಧವಾರ ಸಿಂಹನಗದ್ದೆ ಬಸ್ತಿಮಠದಲ್ಲಿ ವಾರ್ಷಿಕ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯದಲ್ಲಿ 5 ಲಕ್ಷ ಜೈನರಿದ್ದಾರೆ. 1 ಲಕ್ಷ ಜೈನರ ಮನೆಗಳಿವೆ. ಜೈನರು ದೃಢ ವಿಶ್ವಾಸ, ದೃಢ ಸಂಕಲ್ಪ, ಉತ್ತಮ ಸಂಸ್ಕಾರ ಹೊಂದಿರಬೇಕು. ಧರ್ಮದ ಭಾವನೆಯಿಂದ ಕೆಲಸ ಮಾಡುವುವರಿಗೆ  ಯಾವಾಗಲೂ ಭಗವಂತ ಶ್ರೇಯಸ್ಸು ಉಂಟು ಮಾಡುತ್ತಾನೆ ಎಂದು ಅವರು ತಿಳಿಸಿದರು.
ದೀಪದ ಬೆಳಕಿನಂತೆ ಪ್ರಕಾಶ: ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ  ಸ್ವಾಮೀಜಿಗಳು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೀಪವನ್ನು ಹಚ್ಚಿದಾಗ ಬೆಳಕು ಪ್ರಕಾಶಿಸುವಂತೆ ಭಗವಂತನ ಸೇವೆ ಮಾಡಿದಾಗ ದೇವರ ಆಶೀರ್ವಾದಕ್ಕೆ ಪಾತ್ರರಾಗಬಹುದು. ನಯ, ವಿನಯದ ನಡವಳಿಕೆಯಿಂದ ಸತ್ಸಂಗ ಮಾಡಿದರೆ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳವಣಿಗೆ ಹೊಂದಬಹುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಗುಣಪಾಲ್ ಜೈನ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಬಿ. ಪ್ರಸನ್ನಯ್ಯ, ಜಿನರಾಜಯ್ಯ, ರತ್ನರಾಜಯ್ಯ, ಕೇಸರಿ ರತ್ನ ರಾಜಯ್ಯ, ಪದ್ಮಲತಾ ಪ್ರಸನ್ನಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement