ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈತರಿಗೆ ಕೃಷಿ ಮಾಹಿತಿ ಅಗತ್ಯ

Lingaraj Badiger
Updated On : 6 Apr 2013, 11:05 am

ಕ.ಪ್ರ.ವಾರ್ತೆ, ಮೂಡಿಗೆರೆ, ಏ.5
ರೈತರಿಗೆ ಬೆಳೆ ಬೆಳೆಸುವ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಇದನ್ನು ಗಣನೆಗೆ ತೆಗೆದುಕೊಂಡು ಅಗತ್ಯ ಮಾಹಿತಿ ಕೊಡುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಸಬೇಕಾಗಿದೆ ಎಂದು ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಬಿ.ಸಿ.ಅರವಿಂದ್ ಅಭಿಪ್ರಾಯಪಟ್ಟರು.
 ಶುಕ್ರವಾರ ಹ್ಯಾಂಡ್‌ಪೋಟ್ಸ್ ಬಳಿ ಇರುವ ವಲಯ ಕೃಷಿ ಸಂಶೋಧನ ಕೇಂದ್ರದ ಆವರಣದಲ್ಲಿ ನಡೆದ ಬಿಜಿಎಲ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಬೆಳೆಗಾರರು ತಮ್ಮ ತೋಟದಲ್ಲಿ ಬೆಳೆಯುವ ಬೆಳೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಶ್ರಮ ವಹಿಸಬೇಕು. ವಿವಿಧ ಬೆಳೆಗಳಿಗೆ ವಿವಿಧ ರೀತಿಯ ಗೊಬ್ಬರಗಳನ್ನು ಹಾಕುವ ಪದ್ದತಿಯನ್ನು ಸಮರ್ಪಕವಾಗಿ ಮಾಡಬೇಕು. ಬೆಳೆಗಾರನಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ಬೇರೊಬ್ಬರಿಗೆ ಮಾಹಿತಿಯನ್ನು ನೀಡಬೇಕು ಎಂದರು.
ರೈತರಿಗೆ ಮಾಹಿತಿ ನೀಡಿ: ಬಿಜಿಎಲ್ ಸಂಸ್ಥೆಯ ಎಂ.ಜೆ.ದಿನೇಶ್ ಮಾತನಾಡಿ, ಬೆಳೆಗಾರನಿಂದ ಬೆಳೆಗಾರನಿಗೆ, ರೈತನಿಂದ ರೈತನಿಗೆ ಮಾಹಿತಿ ನೀಡುವುದೆ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಕೃಷಿಯ ಅನುಭವವನ್ನು ಇಟ್ಟುಕೊಂಡು ಬೇರೆಯವರಿಗೆ ಮಾಹಿತಿ ನೀಡುವ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ತಿಂಗಳಿಗೊಮ್ಮೆಯಾದರೂ ಬೇರೆ ಬೇರೆ ಕಡೆಗಳಿಂದ ಬೆಳೆಗಾರರು ಹಾಗೂ ವಿಜ್ಞಾನಿಗಳನ್ನು ಕರೆ ತಂದು ರೈತರಿಗೆ ಮಾಹಿತಿಯನ್ನು ನೀಡಬೇಕಾಗಿದೆ ಎಂದರು.
 ಹಿರಿಯ ವಿಜ್ಞಾನಿ ಸತ್ಯನಾರಯಣರೆಡ್ಡಿ, ಡಾ. ಸುಕನ್ಯ ಮಾತನಾಡಿದರು. ಬಿಜಿಎಲ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ಥ ಕೆಂಜಿಗೆ ಕೇಶವ್ ವಹಿಸಿದ್ದರು. ಕಾರ್ಯಕ್ರಮದಲ್ಲಿ  ಜಯರಾಂ ದೇವವೃಂದ, ಡಾ. ಸುನೀಲ್, ನವಿನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement