ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗವಿಕಲರ ಬಸ್ ಪಾಸ್ ನವೀಕರಣ

Lingaraj Badiger
Updated On : 8 Apr 2013, 11:35 am

ಚಿಕ್ಕಮಗಳೂರು: ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವಿಕಲಚೇತನರ ಬಸ್ ಪಾಸನ್ನು 8ರಿಂದ 10ರವರೆಗೆ ನಗರ ಬೇಲೂರು ರಸ್ತೆಯ ತಾಪಂ ಆವರಣದಲ್ಲಿ ನವೀಕರಿಸಿ ವಿತರಿಸಲಾಗುವುದು.
 2012ನೇ ಸಾಲಿನ ಬಸ್ ಪಾಸ್ ಮೂಲ ಗುರುತಿನ ಚೀಟಿ, 2 ಭಾವಚಿತ್ರ ಹಾಗೂ 550 ರು.ಗಳನ್ನು ಪಾವತಿಸಿ ನವೀಕರಿಸಿ ಕೊಳ್ಳಬಹುದಾಗಿದೆ. ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಇಲಾಖೆ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಸ್ಟಾಫ್ ಸೆಲೆಕ್ಷನ್ ಕಮಿಷನ್ ವತಿಯಿಂದ ದೆಹಲಿ ಪೊಲೀಸಿನ ಸಬ್- ಇನ್ಸ್‌ಪೆಕ್ಟರ್ ಹುದ್ದೆ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನಲ್ಲಿ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ಹಾಗೂ ಎನ್.ಸಿ.ಜಿ ಯಲ್ಲಿ ಇಂಟ್ಲಿಜೆನ್ಸಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಜೂನ್ 9 ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ಏ. 12 ಕೊನೆಯ ದಿನವಾಗಿದೆ. ರಿಸರ್ಚ್ ಆಫೀಸರ್ (ಎಕಾನಾಮಿಕ್ಸ್), ಡೆಪ್ಯೂಟಿ ಫೀಲ್ಡ್ ಆಫೀಸರ್ (ಟೆಲಿ ಜಿ.ಡಿ), ಫರ್ಸನಲ್ ಅಸ್ಟಿಸ್ಟೆಂಟ್ ಸ್ಟೇನೋಗ್ರಾಫರ್ ಹುದ್ದೆಗಳಿಗೆ  ಸ್ಪರ್ಧಾತ್ಮಕ ಪರೀಕ್ಷೆ ಜೂನ್ 16 ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಎಂಪ್ಲಾಯ್‌ಮೆಂಟ್ ನ್ಯೂಸ್ ಪತ್ರಿಕೆ ನೋಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement