ಚಿಕ್ಕಮಗಳೂರಿನ ವಿದ್ಯಾರ್ಥಿ ಸಮುದ್ರಪಾಲು
ಕ.ಪ್ರ.ವಾರ್ತೆ ಮಂಗಳೂರು ಏ.7
ಮಂಗಳೂರಿನಲ್ಲಿ ಪರೀಕ್ಷೆಗೆ ಬರೆಯಲು ಬಂದ ಚಿಕ್ಕಮಗಳೂರಿನ ವಿದ್ಯಾರ್ಥಿ ಆಕಾಶ್ ಕಡೂರ್ (17) ಸಮುದ್ರ ಪಾಲಾದ ಘಟನೆ ಭಾನುವಾರ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯ ವಿದ್ಯಾರ್ಥಿಯಾದ ಈತ ಸ್ನೇಹಿತರ ಜತೆ ಪಣಂಬೂರು ಬೀಚ್ನಲ್ಲಿ ಈಜಲು ನೀರಿಗಿಳಿದಿದ್ದ. ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ ಈತನನ್ನು ಜೀವರಕ್ಷಕ ತಂಡ ಸಾಹಸದಿಂದ ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟ ಎಂದು ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿದೆ.