ಇಂದು ಮುಸ್ಲಿಂ ಒಕ್ಕೂಟದ ಸಭೆ
ಕ.ಪ್ರ ವಾರ್ತೆ, ತರೀಕೆರೆ, ಏ. 8
ಬರುವ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ತರೀಕೆರೆಯ ಮುಸ್ಲೀಂ ಸಮುದಾಯವು ಕೈಗೊಳ್ಳಬೇಕಾದ ನಿರ್ಧಾರದ ಬಗ್ಗೆ ಚರ್ಚಿಸುವ ಸಲುವಾಗಿ ಹಾಗು ಮುಸ್ಲಿಮರ ಸರ್ವತೋಮುಖ ಅಭಿವೃದ್ದಿಯ ಕುರಿತು ಚರ್ಚಿಸಲು ಏ.9 ರ ಬೆಳಿಗ್ಗೆ 11 ಗಂಟೆಗೆ ಸಮೀಪದ ಲಕ್ಕವಳ್ಳಿಯ ನಫೀಜಾ ಸಫೀಜಾ ಶಾದಿಮಹಲ್ ನಲ್ಲಿ ಸಭೆ ಕರೆಯಲಾಗಿದೆ ಎಂದು ತಾಲೂಕು ಪ್ರಗತಿಪರ ಮುಸ್ಲೀಂ ಒಕ್ಕೂಟದ ಸಂಚಾಲಕರಾದ ಸಿರಾಜ್ ಆಹಮದ್ ತಿಳಿಸಿದ್ದಾರೆ.
ಸಮುದಾಯದ ರಾಜಕೀಯ ಹೊಣೆಗಾರಿಕೆಯನ್ನು ಚರ್ಚಿಸಲು ತೀರ್ಮಾನಿಸಲು ಎಲ್ಲಾ ಮಸೀದಿಯ ಪದಾದಿಕಾರಿಗಳು ಹಾಗು ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದೆ. ಸಂಬಂದಪಟ್ಟವರು ಈ ಸಭೆಯಲ್ಲಿ ಭಾಗವಹಿಸಿ ಒಕ್ಕೂಟದೊಂದಿಗೆ ಸಹಕರಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿಕೆಯಲ್ಲಿ ಕೋರಿದ್ದಾರೆ.