ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹೋರಾಟ

Lingaraj Badiger
Updated On : 9 Apr 2013, 11:13 am

ಕ.ಪ್ರ ವಾರ್ತೆ, ಕೊಪ್ಪ, ಏ. 8
ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯಗಳಲ್ಲಿ ಚುನಾವಣೆ ತಂತ್ರಗಾರಿಗೆ ರೂಪಿಸಲು ಪಕ್ಷದ ಮುಖಂಡರನ್ನು ಒಳಗೊಂಡು ಕಾರ್ಯಕರ್ತರು ಗುಪ್ತ ಔತಣ ಕೂಟಗಳಳಲ್ಲಿ ಸದ್ದಿಲ್ಲದೇ ತೊಡಗಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯ ಬಿಜೆಪಿ ಓಟು ಬ್ಯಾಂಕ್ ಎಂದು ಹೇಳಲ್ಪಪಟ್ಟಿತ್ತು. ಅದರೆ ಮಾ. 30ಮತ್ತು 31 ರಂದು ಶೃಂಗೇರಿಯಲ್ಲಿ ನಡೆದ ವಿಪ್ರ ಸಮ್ಮೇಳದಲ್ಲಿ ಬಿಜೆಪಿ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ವದಂತಿಯಿಂದ ಬಿಜೆಪಿ ಪಾಳೆಯದಲ್ಲಿ ಅತಂಕ ಹುಟ್ಟಿಸಿದೆ ಎನ್ನಲಾಗುತ್ತಿದೆ.
ರಾಜೇಗೌಡ ಅಭ್ಯರ್ಥಿ: ಇನ್ನೊಂದೆಡೆ ಶೃಂಗೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂಡಿಗೆರೆ ಕ್ಷೇತ್ರದ ತಾರದೇವಿಯವರು ಘೋಷಣೆಯಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿ, ಕ್ಷೇತ್ರದ ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಘೋಷಣೆಯಾಗಿರುವುದು ಸಹ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಟಿ.ಡಿ. ರಾಜೇಗೌಡ ಶೃಂಗೇರಿ ಕ್ಷೇತ್ರದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸರಳ, ಸಜ್ಜನಿಕೆ, ಸಮಾಜಸೇವೆ ಮಾಡುವ ಮೂಲಕ ಕ್ಷೇತ್ರದ ಯುವಕರ ಮತ್ತು ಜನತೆಯ ಮೇಚ್ಚುಗೆ ಪಾತ್ರವಾಗಿರುವುದು. ಎದುರಾಳಿಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಕಬ್ಬಿಣದ ಕಡಲೆ ರೀತಿಯಲ್ಲಿ ಪರಿಣಿಮಿಸಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಭಿವೃದ್ಧಿಯ ಹರಿಕಾರ: ಶೃಂಗೇರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂದು ಬಣ್ಣಿಸಲಾಗುತ್ತಿರುವ ಬಿಜೆಪಿ ಅಭ್ಯರ್ಥಿ ಸಚಿವ ಡಿ.ಎನ್. ಜೀವರಾಜ್ ಕೂಡಾ ಸರಳ, ಸಜ್ಜನಿಕೆ ಗುಣದಿಂದ ಜನಸಾಮಾನ್ಯರ ವಿಶ್ವಾಸ ಗೆದ್ದಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಸೆಣಸಾಟ ಏರ್ಪಟ್ಟಿದೆ.
ಎದುರಾಳಿಗಳನ್ನು ಮಣಿಸಲು ಚುನಾವಣಾ ರಣತಂತ್ರ ರೂಪಿಸಲು ಜನನಿಬಿಡ ಪ್ರದೇಶಗಳಲ್ಲಿ ಪಕ್ಷದ ಮುಖಂಡರನ್ನು ಒಳಗೊಂಡ ಬೂತ್ ಮಟ್ಟದ ಕಾರ್ಯಕರ್ತರಿಗೆ ಬಾಡೂಟದ ಔತಣಕೂಟ ಏರ್ಪಡಿಸುವ ಮೂಲಕ ನೀತಿ ಸಂಹಿತೆ ವಿರೋಧಿಸುವ ಕೆಲಸದಲ್ಲಿ ರಾಜಕೀಯ ಪಕ್ಷಗಲು ತೊಡಗಿವೆ. ಇನ್ನೊಂದೆಡೆ ಶೃಂಗೇರಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗದೇ ಇರುವುದು ಜೆಡಿಎಸ್ ಪಾಳೆಯದಲ್ಲಿ ಅತಂಕ ಉಂಟಾಗಿದೆ. ಚುನಾವಣೆಗೆ ಉಳಿದಿರುವ ಅಲ್ಪಕಾಲದಲ್ಲಿ ಅಭ್ಯರ್ಥಿಯ ಘೋಷಣೆಯಾಗದೇ ಪಕ್ಷವನ್ನು ಹೇಗೆ ಸಂಘಟಿಸುವುದು ಎಂಬ ಪ್ರಶ್ನೆ  ಕಾರ್ಯಕರ್ತರಲ್ಲಿ ಉಲ್ಬಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement