ಮತಕ್ಕಾಗಿ ಹೊಸ ನಾಟಕ: ಆರೋಪ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.8
ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಇದೀಗ ಮತಕ್ಕಾಗಿ ಹೊಸ ನಾಟಕ ಮಾಡುತ್ತಿದೆ. ಅಲ್ಪಸಂಖ್ಯಾತರು ಅವರ ಬಣ್ಣದ ಮಾತುಗಳಿಗೆ ಮರುಳಾಗಬಾರದು ಎಂದು ಜೆಡಿಎಸ್ ರಾಜ್ಯ ಯುವ ಕಾರ್ಯಾಧ್ಯಕ್ಷ ಸಿ.ಎನ್. ಅಕ್ಮಲ್ ಹೇಳಿದ್ದಾರೆ.
ನಗರದ ಅಂಡೇ ಕ್ಷೇತ್ರದ ಬಳಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡವರಿಗೆ ಸ್ವಾಗತಕೋರಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ನೆನಪಾಗುತ್ತದೆ. ಅವರ ಯಾವುದೇ ಭರವಸೆಗಳನ್ನು ನಂಬಬಾರದು ಎಂದರು.
ಎ.ಆರ್. ಷರೀಫ್ ಮಾತನಾಡಿ, ಅಲ್ಪಸಂಖ್ಯಾತರ ಮತಗಳನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದರು. ಬೆನಕ ರವಿ, ಜಮ್ಷಿದ್ ಖಾನ್, ಸಿರಾಜ್, ಸೈಯದ್ ಜಾವಿದ್, ನಯಾಜ್ ಅಹ್ಮದ್ ಹಾಜರಿದ್ದರು.