'ಸಮುದಾಯ ಸಂಘಟನೆಗಷ್ಟೇ ಸಮ್ಮೇಳನ'
ಕ.ಪ್ರ.ವಾರ್ತೆ, ಕೊಪ್ಪ, ಏ.8 ಶೃಂಗೇರಿ ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನವನ್ನು ರಾಜಕೀಯೇತರವಾಗಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಶೃಂಗೇರಿ ತಾಲೂಕು ಬ್ರಾಹ್ಮಣ ಸಮಾಜ ಅಧ್ಯಕ್ಷ ಹಾಗೂ ವಿಪ್ರ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರಯ್ಯ ರವರು ತಿಳಿಸಿದ್ದಾರೆ.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಮಾತನಾಡಿದ ಅವರು ಮಾ.30 ಮತ್ತು 31 ರಂದು ಆಯೋಜಿಸಲಾಗಿದ್ದ ವಿಪ್ರ ಸಮ್ಮೇಳನವನ್ನು ವಿಪ್ರ ಸಮುದಾಯವನ್ನು ಸಂಘಟಿಸಿ, ಸ್ವಾವಲಂಬನೆ ಮತ್ತು ಸಂಸ್ಕಾರಗಳಂತಹ ಒಳ್ಳೆಯ ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಅದರ ಉಪಯೋಗ ತಲುಪಿಸುವ ಉದ್ದೇಶದಿಂದಷ್ಟೇ ಏರ್ಪಡಿಸಲಾಗಿತ್ತು ಎಂದರು. ಸಮ್ಮೇಳನಕ್ಕೆ ಬ್ರಾಹ್ಮಣ ಸಮುದಾಯ ಹೊರತಾಗಿ ಎಲ್ಲಾ ಸಮುದಾಯದ ಜನರು ಸಹಕಾರ ನೀಡಿದ್ದರಿಂದ ಕೇವಲ ಮೂರು ತಿಂಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಸಹಕಾರಿಯಾಗಿದೆ ಅದ್ದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದದಿಸುವುದಾಗಿ ತಿಳಿಸಿದರು.