21ರಂದು ಉರೂಸ್
ಶೃಂಗೇರಿ: ಇಲ್ಲಿನ ನೆಮ್ಮಾರು ಹಜರತ್ ದಿಲಾವರುಷ ಔಲಿಯ ದರ್ಗಾದಲ್ಲಿ ವಿಶೇಷ ಉರೂಸ್ ಸಮಾರಂಭವನ್ನು ಏ.21ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5 ಗಂಟೆಯಿಂದ ಆಕರ್ಷಕ ಝರಬ್, ದಫ್ ಕಾರ್ಯಕ್ರಮದೊಂದಿಗೆ ಮುಖ್ಯ ಬೀದಿಯಲ್ಲಿ ಸಂದಲ್ ಮೆರವಣಿಗೆ ನಡೆಯಲಿದೆ. ನಂತರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದ್ದು, ನಂತರ ಶಿವಮೊಗ್ಗದ ಮುಬಾಲಿಗಿನ್ ಸನ್ನಿ ದಾವತ್-ಇಸ್ಲಾಮಿ ತಂಡದದವರಿಂದ ನಾಥ್, ಬಯಾನಾಥ್, ತರ್ಬಿಯತ್ ಇಸ್ತಿಮಾ ನಡೆಯಲಿದೆ.