ಅಕ್ರಮ ಮದ್ಯ ಮಾರಾಟ: ಬಂಧನ
ಕೊಪ್ಪ: ತಾಲೂಕಿನ ಮರೀತೋಟ್ಲು ಗ್ರಾಪಂನ ಕಾಚ್ಗಲ್ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯಮಾರಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಪ್ಪ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ಮತ್ತು ಆರೋಪಿಯನ್ನು ಬಂದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕೊಪ್ಪ ಪಿಎಸ್ಐ ಗವಿರಾಜ್ ನೇತೃತ್ವದ ತಂಡ ಸೊಮವಾರ ರಾತ್ರಿ ಕಾಚ್ಗಲ್ನ ನಾಗರಾಜ್ ಅಂಗಡಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ವಿವಿಧ ಕಂಪನಿಯ ಬೀರ್ ಬಾಟಲ್ ಮತ್ತು ವಿಸ್ಕಿ ಪೌಂಚ್ಗಳು ಸಿಕ್ಕಿದ್ದು ಇವುಗಳನ್ನು ವಶಪಡಿಸಿಕೊಂಡು ಅಕ್ರಮವಾಗಿ ಮದ್ಯಮಾರಟ ಮಾಡುತ್ತಿದ್ದಾರೆ ಎಂದು ಪ್ರಕರಣವನ್ನು ದಾಖಲು ಮಾಡಿ ಆರೋಪಿ ನಾಗರಾಜ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.