ಉತ್ತಮ ಕೆಲಸ ಮಾಡಿ
ಕಪ್ರವಾರ್ತೆ,ಚಿಕ್ಕಮಗಳೂರು, ಏ.9
ಯಾವ ಒಬ್ಬ ಮನುಷ್ಯ ಜನಪರ ಕಾಳಜಿ ಹೊಂದಿ ಒಳ್ಳೆ ಕೆಲಸ ಮಾಡಿದರೆ ಅಂತಹವರಿಗೆ ಭಗವಂತನ ಆಶೀರ್ವಾದ ನಿಶ್ಚಿತವಾಗಿಯೂ ಇರುತ್ತದೆ ಎಂದು ಕ್ರೈಸ್ತ ಧರ್ಮಾಧ್ಯಕ್ಷರಾದ ಡಾ. ಅಂತೋಣಿ ಸ್ವಾಮಿ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರು ಮಂಗಳವಾರ ಜ್ಯೋತಿನಗರದ ಬಿಷಪ್ ಹೌಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಚಿವ ಸಿ.ಟಿ. ರವಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಮತ್ತು ಒಳ್ಳೆತನಕ್ಕೆ ಧರ್ಮಗುರುಗಳು ಸ್ಫೂರ್ತಿಯಾಗಿದ್ದಾರೆ. ನನ್ನಲ್ಲಿರುವ ತಪ್ಪುಗಳನ್ನು ತಿದ್ದಿ ಆಶೀರ್ವದಿಸಿ ಎಂದು ಈ ಹಿಂದೆಯೂ ಹಲವು ಬಾರಿ ಬಂದಿದ್ದಾಗಿ ತಿಳಿಸಿದ ಅವರು, ಎಲ್ಲಾ ಧರ್ಮ ಗುರುಗಳನ್ನು ಭೇಟಿ ಮಾಡಿ ಜನರ ನೆಮ್ಮದಿ ಮತ್ತು ಊರಿನ ಅಭಿವೃದ್ಧಿಗೆ ಹಾರೈಕೆ ಬೇಡುವುದು ನನ್ನ ಪದ್ಧತಿಯಾಗಿದ್ದು ಅದರಂತೆ ಇಂದು ಭೇಟಿ ನೀಡಿದ್ದೇನೆ ಎಂದರು.
ನನಗೆ ದೊರೆತ ಕಡಿಮೆ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡುದಿದ್ದೇನೆ. ಎಲ್ಲರಿಗೂ ಬೇರೆನೂ ಕೊಡಲಾಗದಿದ್ದರೂ ವಿದ್ಯೆಕೊಡಬಹುದು ಎಂಬ ಗುರಿ ಹೊಂದಿ ಬಡವರಿಗೆ ಅನುಕೂಲವಾಗುವಂತೆ ಎರಡು ಸರ್ಕಾರಿ ಕಾಲೇಜುಗಳನ್ನು ತಂದಿದ್ದೇನೆ. ಇದರಿಂದ ಜಿಲ್ಲೆಯಲ್ಲಿ ಉತ್ತಮ ವಾತಾವರಣ ಹೊಮ್ಮಿ ಕಾರ್ಮಿಕರಾದಿಯಾಗಿ ಉದ್ಯೋಗ ಅವಕಾಶ ಹೆಚ್ಚಿ ಬದಲಾವಣೆ ಕಾಣಬಹುದು ಎಂದು ಹೇಳಿದರು.
ಫಾದರ್ ಡೇವಿಡ್ ಪ್ರಕಾಶ್, ಫಾದರ್ ಪ್ಯಾಟ್ರಿಕ್ ಡಿಸೋಜ್, ಫಾದರ್ ಜೆರೋನ್ ಮಚಾದೋ, ದೇವರಾಜ್ ಶೆಟ್ಟಿ, ಸುಧೀರ್, ರವೀಂದ್ರ ಪ್ರಭು, ವರಸಿದ್ದಿ ವೇಣುಗೋಪಾಲ್, ಎನ್. ಕೇಶವ, ಜೋಸೆಫ್ ಇದ್ದರು.