ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೀವನ ಕ್ರಮ ತಿಳಿಸುವ ಪೌರಾಣಿಕ ಕಥೆಗಳು

Rashmi Kasaragodu
Updated On : 10 Apr 2013, 10:56 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಏ.9
ಪೌರಾಣಿಕ ಕಥೆಗಳಲ್ಲಿ ನೀತಿ ಅಡಗಿದೆ. ಬದುಕಿಗೆ ಬೇಕಾದ ಜೀವನ ಕ್ರಮವನ್ನು ಪ್ರಸ್ತುತಪಡಿಸುತ್ತದೆ ಎಂದು ಜಿಲ್ಲಾ ಗಮಕ ಕಲಾಪರಿಷತ್ತು ಅಧ್ಯಕ್ಷ ರಾಮಸುಬ್ರಾಯಶೇಟ್ ಹೇಳಿದ್ದಾರೆ.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನವು ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಪೌರಾಣಿಕದಲ್ಲಿ ನೀತಿ ಕುರಿತಂತೆ ಅವರು ಮಾತನಾಡಿದರು.
ರಾಮಾಯಣ- ಮಹಾಭಾರತ ಶ್ರೇಷ್ಠ ಕೃತಿಗಳು: ರಾಮಾಯಣ- ಮಹಾಭಾರತ ಜಗತ್ತಿನ ಶ್ರೇಷ್ಠ ಕೃತಿಗಳು. ಇದರಲ್ಲಿ ರಾಜನೀತಿ ಸೇರಿದಂತೆ ಎಲ್ಲ ಜನರ ಕರ್ತವ್ಯ ಪಾಲನೆ ಬಗ್ಗೆ ಮಾರ್ಗದರ್ಶನವಿದೆ ಎಂದರು.
ಭಕ್ತಿ ಮತ್ತು ಸೇವೆಗೆ ಎಂದೂ ಮಾನ್ಯತೆ ಎಂಬುದನ್ನು ರಾಮಾಯಣ ಸಾರಿದೆ. ಪುರುಷೋತ್ತಮನಾದ ಶ್ರೀರಾಮ ಇರುವಲ್ಲಿ ಸದಾ ಆಂಜನೇಯನಿಗೆ ಸ್ಥಾನವಿರುತ್ತದೆ. ಕರ್ತವ್ಯ ಪ್ರಜ್ಞೆ ಭಕ್ತಿ ಮತ್ತು ಸೇವೆಗೆ ಆಂಜನೇಯ ಪ್ರತೀಕವಾಗಿ ಗೋಚರಿಸುತ್ತಾನೆ. ತಂದೆಯ ಸುಖಕ್ಕಾಗಿ ಮಗನೇ ಮುಂದೆ ನಿಂತು ಮದುವೆ ಮಾಡಿದಷ್ಟೇ ಅಲ್ಲ ಆ ಜನ್ಮ ಬ್ರಹ್ಮಚಾರಿಯಾಗಿ ಬದುಕುವ ಪ್ರತಿಜ್ಞೆ ಮಾಡಿದ ಭೀಷ್ಮನ ಪಿತೃಭಕ್ತಿ ಮಾದರಿ. ಪರುಶುರಾಮ 21 ಬಾರಿ ಪ್ರದಕ್ಷಣೆ ಮಾಡಿ ಕ್ಷತ್ರಿಯರನ್ನು ನಾಶ ಮಾಡುವ ಸಂಕಲ್ಪ ಭೂಮಿ ದಂಡಾಗಿದೆ ಎಂಬುದನ್ನು ಸಾರುತ್ತದೆ.
ಉತ್ಕೃಷ್ಟ ಸಂಸ್ಕೃತಿ: ಗಣಪತಿ ಮತ್ತು ಸುಬ್ರಮಣ್ಯ ಕಥೆಯಲ್ಲಿ ಶಿವ- ಪಾರ್ವತಿಯರೇ ಸೃಷ್ಟಿ ಎಂಬುದನ್ನು ಹೇಳುತ್ತಾ ಭೂಮಿ ಗುಂಡಾಗಿರುವ ಹಿನ್ನಲೆಯಲ್ಲಿ ಸುಬ್ರಮಣ್ಯ ಭೂ ಪ್ರದಕ್ಷಣೆ ಹಾಕಿದ ಕಥೆ ಬರುತ್ತದೆ.
ಕೋಪರ್ನಿಕಸ್, ಕೆಪ್ಲರ್, ಗೆಲಿಲಿಯೋ ಮೂಲಕ ಭೂಮಿ ಗುಂಡಾಗಿದೆ ಎಂಬುದನ್ನು 500 ವರ್ಷಗಳ ಹಿಂದೆಯಷ್ಟೇ ಒಪ್ಪಿರುವ ಜಗತ್ತು, ಸಾವಿರಾರು ವರ್ಷಗಳ ಹಿಂದೆಯೇ ಭಾರತ ಈ ಸತ್ಯವನ್ನು ಕಂಡುಕೊಂಡಿತ್ತು.  ಭಾರತೀಯ ಪರಂಪರೆ- ಸಂಸ್ಕೃತಿ ಉತ್ಕೃಷ್ಟವಾಗಿದ್ದು ಖಗೋಳ, ಗಣಿತ, ಭೂಗೋಳ ಸೇರಿದಂತೆ ಉನ್ನತವಾದ ಕೊಡುಗೆ ನೀಡಿತ್ತೆಂಬುದನ್ನು ಮರೆಯಬಾರದು ಎಂದರು.
ಗುರು-ಹಿರಿಯರ ಗೌರವಿಸಿ: ದೇವರು ಅನ್ನುವ ಶಕ್ತಿ ನಿರಾಕಾರ ಮತ್ತು ಸರ್ವವ್ಯಾಪಿ ಎಂದು ನಂಬಿದ ದೇಶ ಭಾರತ. ಆ ಮೂಲಕ ಕೆಡುಕನ್ನು ಮಾಡಬಾರದು ಎಂದು ನೀತಿ ಹೇಳಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಪಾಶ್ಚಾತ್ಯ ಅನುಕರಣೆಯ ಭರದಲ್ಲಿ ನಮ್ಮತನ, ನಮ್ಮಹಿರಿಮೆ-ಗರಿಮೆಯ ಬಗ್ಗೆ ವಿಸ್ಮತಿ ಉಂಟಾಗಬಾರದೆಂದು ಹೇಳಿದರು.
ಶಿಕ್ಷಕಿ ಎಲ್.ಟಿ. ಜಯಂತಿ, ಶಿಬಿರಾರ್ಥಿ ಭರತ್ ಕುಮಾರ್, ಶಿಬಿರಾಧಿಕಾರಿ ಎಸ್.ಇ. ಲೋಕೇಶ್ವರಾಚಾರ್ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿದರು, ಶಿಬಿರಾರ್ಥಿ ಲಿಖಿತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement