ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ತುಂಗ ನದಿ ದಂಡೆಯಲ್ಲಿ ಅಕ್ರಮ ಮರಳು ಸಾಗಾಟ: ಲಾರಿ, ಚಾಲಕ ವಶಕ್ಕೆ

Rashmi Kasaragodu
Updated On : 10 Apr 2013, 10:56 am

ಕೊಪ್ಪ: ತಾಲೂಕಿನ ನರಸೀಪುರದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಹರಿಹರಪುರ ಪೊಲೀಸರು ಮಂಗಳವಾರ ಬೆಳಿಗ್ಗೆ ತಡೆದು ಲಾರಿ ಮತ್ತು ಚಾಲಕನನ್ನು ಬಂದಿಸಿದ್ದಾರೆ.
 ನರಸೀಪುರ ಗ್ರಾಮದ ತುಂಗ ನದಿಯ ದಂಡೆಯಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹರಿಹರಪುರದ ಪಿಎಸ್‌ಐ ಚಂದ್ರಶೇಖರ್ ಸ್ಥಳಕ್ಕೆ ದಾವಿಸುವ ನರಸೀಪುರ ಮಾರ್ಗದಲ್ಲಿ ಮರಳು ತುಂಬಿದ ಲಾರಿ ತಡೆದು ತಪಾಸಣೆ ಮಾಡಿ ನಂತರ ತುಂಗ ನದಿಯ ದಂಡೆ ಪರೀಶೀಲಿಸಿದ ಸಂದರ್ಭದಲ್ಲಿ ಲೋಡ್ ಗಟ್ಟಲೆ ಮರಳನ್ನು ಅಕ್ರಮವಾಗಿ ತುಂಬಿರುವ ಕುರುಗಳು ಸಿಕ್ಕೆವೆ ಎಂದು ಪೊಲೀಸರು ತಿಳಿಸಿದ್ದಾರೆ.
 ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಮತ್ತು ಚಾಲಕ ಪ್ರವೀಣ್‌ರನ್ನು ಬಂಧಿಸಿ ಮುಂದಿನ ಕ್ರಮಕ್ಕೆ ತಹಸೀಲ್ದಾರ್‌ಗೆ ವರದಿ ಸಲ್ಲಿಸಲಾಗಿದೆ ಎಂದು ಹರಿಹರಪುರ ಪಿಎಸ್‌ಐ ಚಂದ್ರಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement