ಹೆಬ್ಬೆ ಯೋಜನೆ ಜಾರಿಗೆ ಕ್ರಮ
ಕ.ಪ್ರ.ವಾರ್ತೆ ಟಿ ಕಡೂರು ಟಿ ಏ.9
ಹೆಬ್ಬೆ ಯೋಜನೆ ಜಾರಿ ಹಾಗೂ ಕರಗಡದಿಂದ ಕಸಬಾ ಕೆರೆಗೆಳಿಗೆ ನೀರು ಹರಿಸಲು ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾದ ತನಗೆ ಮತ ನೀಡಬೇಕು ಎಂದು ಕಡೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಬನಶಂಕರಿ ಸಮುದಾಯಭವನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ತನಗೆ ಟಿಕೆಟ್ ನೀಡಿರುವುದರಿಂದ ಪಕ್ಷಕ್ಕೆ ಋಣಿಯಾಗಿದ್ದೇನೆ. ಕ್ಷೇತ್ರದ ದಿ.ಕೆ.ಎಂ. ಕೃಷ್ಣಮೂರ್ತಿಯವರಂತೆ ಜನರ ನಿಜವಾದ ಧ್ವನಿಯಾಗಿ ಕೆಲಸ ಮಾಡಲು ಸಿದ್ದನಿದ್ದೇನೆ. ಹೆಬ್ಬೆ ಯೋಜನೆಗೆ ನಾನು ಚಾಲನೆ ಕೊಡಿಸಿದ್ದು 2003ರಲ್ಲಿ ಈ ಯೋಜನೆ ಮಂಜೂರಾಗಿ ಎಸ್.ಎಸ್. ಪಾಟೀಲ್ 5 ಲಕ್ಷರು. ನೀಡಿದ್ದು ಈ ಯೋಜನೆ ಜಾರಿಯ ಅಗತ್ಯವಿದೆ ಎಂದರು.
ಬಿಜೆಪಿ, ಕೆಜೆಪಿ ಮತ್ತು ಬಿಎಸ್‌ಆರ್ ಎಂಬ ಮೂರು ಸವಕಲು ನಾಣ್ಯಗಳಾಗಿದ್ದು, ಹಗರಣಗಳಲ್ಲಿ ಮುಳುಗಿರುವ ಬಿಜೆಪಿಯನ್ನು ಜನ ತಿರಸ್ಕರಿಸಿಲಿದ್ದಾರೆ. ಜೆಡಿಎಸ್ ಕಳೆದೆ ಚುನಾವಣೆಯಲ್ಲಿ ನೀಡಿದ ಭರವಸೆಗಳ ಬಗ್ಗೆ ಜನರಿಗೆ ತಿಳಿದಿದೆ. ಕಾರ್ಯಕರ್ತರು ಮತದಾರರ ಮನವೊಲಿಸಿ ಕಾಂಗ್ರೆಸ್‌ಗೆ ಮತ ಕೊಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷದವರ ಮೇಲೆ 300 ಪ್ರಕರಣ ದಾಖಲು ಮಾಡಿದ್ದು ಜಿಲ್ಲಾಧಿಕಾರಿಗಳು ಮತ್ತು ವರಿಷ್ಠಾಧಿಕಾರಿಗಳು ಬಿಜೆಪಿ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಎಚ್.ಎಂ. ಲೋಕೇಶ್ ಮಾತನಾಡಿ, ಎಲ್ಲ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ವಲಸೆ ಬಂದವರಿಗೆ ಹೆಚ್ಚು ಆದ್ಯತೆ ನೀಡಬಾರದು ಎಂದರು. ಸಭೆಯಲ್ಲಿ ಜಿಲ್ಲಾ ವಕ್ತಾರ ಎ.ಎನ್. ಮಹೇಶ್, ಎಂ.ಎಚ್. ಚಂದ್ರಪ್ಪ, ಮಹೇಶ್ ಒಡೆಯರ್, ಕೆ.ಎಚ್. ಉಮೇಶ್, ಎಚ್.ಎಂ. ಲೋಕೇಶ್, ತೋಟದ ಮನೆ ಮೋಹನ್, ಕೆ.ಆರ್. ರವಿಕುಮಾರ್, ಸಾವಿತ್ರಿಗಂಗಪ್ಪ, ಕೆ.ಎಂ. ಸೋಮಶೇಖರ್, ಚಂದ್ರಮೌಳಿ, ಕೆ.ಎಚ್. ಗೋಪಾಲ್, ಕೆ.ಎನ್. ಬೊಮ್ಮಣ್ಣ, ಬಿ.ಬಿ. ಜಗದೀಶ್, ಕೆ.ಜಿ. ಶ್ರೀನಿವಾಸಮೂರ್ತಿ, ಕೆ.ಎಚ್. ರಂಗನಾಥ್, ಡಿ. ಲಕ್ಷ್ಮಣ್, ಕೆ.ಎಸ್. ಆನಂದ್, ನಟರಾಜ್ ಇದ್ದರು.
ಆಣೆ ಮಾಡಲು ಸಿದ್ಧ: ಕೆಬಿಎಂ
ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೇನೆ ಎಂದು ಆರೋಪಿಸಿ ಧರ್ಮಸ್ಥಳದಲ್ಲಿ ಆಣೆ ಮಾಡಲು ಕರೆದಿರುವ ಕೆ.ಎಂ. ಕೆಂಪರಾಜು ಸವಾಲನ್ನು ಸ್ವೀಕರಿಸಿದ್ದೇನೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಬೆಂಬಲಿಗರ ಸಭೆಯಲ್ಲಿ ಕೆ.ಎಂ. ಕೆಂಪರಾಜುರವರು ನಾನು ಕಳೆದ ಉಪ ಚುನಾವಣೆಯಲ್ಲಿ ಪಕ್ಷದ್ರೋಹ ಮಾಡಿ ಬಿಜೆಪಿಗೆ ಬೆಂಬಲಿಸಿರುವುದಾಗಿ ಆರೋಪಿಸಿ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಆಹ್ವಾನ ನೀಡಿದ್ದಾರೆ. ನಾನು ಅವರ ಫಂಥಾಹ್ವಾನವನ್ನು ಸ್ವೀಕರಿಸಿದ್ದೇನೆ. ಇದು ಚುನಾವಣೆಗಿಂತ ಮುಂಚೇಯೇ ಗಣ್ಯರ, ಮಠಾಧೀಶರ ಸಮ್ಮುಖದಲ್ಲಿ ನಡೆಯಬೇಕು. ಅದಕ್ಕೆ ನಾನು ತಯಾರಿದ್ದೇನೆ ಎಂದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಚಂದ್ರಮೌಳಿ ಇದ್ದರು.