ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಏರುತ್ತಿರುವ ಉರಿ ಬಿಸಿಲಿನ ತಾಪ: ಜನ ಕಂಗಾಲು

Lingaraj Badiger
Updated On : 13 Apr 2013, 10:38 am

ಕ.ಪ್ರ ವಾರ್ತೆ, ನರಸಿಂಹರಾಜಪುರ, ಏ.12
ನೀರಿಲ್ಲದೆ ಹಳ್ಳ, ಬಾವಿ, ಜರಿಗಳೆಲ್ಲಾ ಬತ್ತಿ ಹೋಗಿದೆ. ಒಂದೇ ಸಮನೆ ಏರುತ್ತಿರುವ ಉರಿ ಬಿಸಿಲಿನ ತಾಪಕ್ಕೆ ಜನ ಕಂಗಾಲಾಗಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಬೋರ್‌ವೆಲ್‌ಗಳೇ ಕುಡಿವ ನೀರಿಗೆ ಆಸರೆಯಾಗಿದೆ. ಇದುವರೆಗೂ ಅಂತಹ  ಕುಡಿಯುವ ನೀರಿನ ತೊಂದರೆ ಎದುರಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕ ುಡಿಯುವ ನೀರಿನ ಯೋಜನೆಗಳು  ಸಮರ್ಪಕವಾಗಿದ್ದರೂ ವಿದ್ಯುತ್ ಸಮಸ್ಯೆಗಳಿಂದ ಸಮರ್ಪಕವಾಗಿ ನೀರು ಕೊಡಲಾಗುತ್ತಿಲ್ಲ. ಆದರೂ ಬಯಲುಸೀಮೆಗೆ ಹೋಲಿಸಿದರೆ ತಾಲೂಕಿನಲ್ಲಿ ಕುಡಿವ ನೀರಿಗೆ ಇದುವರೆಗೆ ಬರ ಬಂದಿಲ್ಲ. ಆದರೆ, ಇನ್ನೂ ಮಳೆ ಬರದಿದ್ದರೆ ಕುಡಿವ ನೀರಿಗೂ ತೊಂದರೆ ಎದರಾಗಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅಡಿಕೆ ತೋಟಗಳಿಗೆ ನೀರಿಲ್ಲ: ಮಾರ್ಚ್ ತಿಂಗಳವರೆಗೂ ಅಡಿಕೆ ತೋಟಗಳಿಗೆ ನೀರಿನ ತೊಂದರೆ ಎದರಾಗಿರಲಿಲ್ಲ. ಆದರೆ, ಕಳೆದ 15 ದಿನದಿಂದ ನೀರಿನ ಮೂಲಗಳೆಲ್ಲಾ ಬತ್ತಿ ಹೋಗಿದ್ದು ಅಡಿಕೆ ತೋಟಗಳು ಒಣಗಲಾರಂಭಿಸಿದೆ. ಕೆಲವು ರೈತರು ಹಳ್ಳಗಳಿಂದ ಪಂಪ್ ಮೂಲಕ ಅಡಿಕೆ ತೋಟಗಳಿಗೆ ನೀರು ಬಿಡುತ್ತಿದ್ದರು. ಈಗ ಹಳ್ಳಗಳು  ಒಣಗಿ ನಿಂತು ರೈತರು ಕಂಗಾಲಾಗಿದ್ದಾರೆ. ಬೋರ್‌ವೆಲ್ ಕೊರೆಸಿದ ಅಡಿಕೆ ಬೆಳೆಗಾರರು ಮಾತ್ರ ನೀರಿನ ತೊಂದರೆ ಎದುರಿಸುತ್ತಿಲ್ಲ.
ಹುಯ್ಯೋ ಮಳೆರಾಯ: ಸಾಮಾನ್ಯವಾಗಿ ಮಲೆನಾಡಿನ ಭಾಗದಲ್ಲಿ ಏಪ್ರಿಲ್ ಮೊದಲನೇ ವಾರ ದಾಟುತ್ತಿದ್ದಂತೆ ಮೊದಲ ಮಳೆ ಸಿಂಚನವಾಗುತ್ತಿತ್ತು. ಈ ವರ್ಷ ಯುಗಾದಿ ಹಬ್ಬ ದಾಟಿ ಏ.3ನೇ ವಾರಕ್ಕೆ ಕಾಲಿಟ್ಟರೂ ಮಳೆ ಬರುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಮೋಡವಾಗಿ ತುಂತುರು ಹನಿ ಮಳೆ ಬಿದ್ದಿದೆ. ಈಗ ರೈತರು ಉರಿ ಬಿಸಿಲಿನ ಮಧ್ಯೆ ನಿಂತು ಮಳೆಗಾಗಿ ಪ್ರತಿನಿತ್ಯ ಆಕಾಶದ ಕಡೆಗೆ ನೋಡಿ ಹುಯ್ಯೋ, ಹುಯ್ಯೋ ಮಳೆರಾಯ ಎಂದು ಕೂಗಿ ಕರೆಯುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement