ಕನ್ನಡದಲ್ಲಿ ನಾಮಫಲಕವಿರಲಿ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಏ.12
ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ, ಎಲ್ಲಾ ವಾಣಿಜ್ಯ ಉದ್ಯಮಿಗಳು ತಮ್ಮ ತಮ್ಮ ವ್ಯಾಪಾರ ಕೇಂದ್ರಗಳಿಗೆ ಕನ್ನಡದಲ್ಲಿಯೇ ನಾಮಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಚಿಕ್ಕಮಗಳೂರು ನಗರದ ಕೆಲವು ಉದ್ದಿಮೆಗಳ ಮಾಲೀಕರು ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳಲ್ಲಿ ಉದ್ದಿಮೆಗಳ ನಾಮಫಲಕಗಳನ್ನು ಅಳವಡಿಸಿರುವುದು ಕಂಡು ಬಂದಿರುತ್ತದೆ. ಎಲ್ಲಾ ಉದ್ದಿಮೆಗಳ ಮಾಲಿಕರು ತಕ್ಷಣವೇ ತಮ್ಮ ಉದ್ದಿಮೆಗಳ ನಾಮಫಲಕಗಳಲ್ಲಿ ಮೊದಲು ಕನ್ನಡದಲ್ಲಿ ದಪ್ಪ ಅಕ್ಷರಗಳಲ್ಲಿ ಉದ್ದಿಮೆಯ ಹೆಸರನ್ನು ನಮೂದಿಸತಕ್ಕದ್ದು. ಇಲ್ಲವಾದಲ್ಲಿ ನಗರಸಭೆಯಿಂದ ಸದರಿ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ಉದ್ದಿಮೆಯನ್ನು ಮುಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ನಗರಸಭಾ ಆಯುಕ್ತರಾದ ಪ್ರಭಾಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳು ಹಾಗೂ ಫ್ಲೆಕ್ಸ್‌ಗಳಲ್ಲಿಯೂ ಸಹ ಜಾಹೀರಾತು ಪ್ರದರ್ಶಿಸುವ ಮೊದಲ ಸಾಲುಗಳಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡವನ್ನೇ ಬಳಸತಕ್ಕದ್ದು ಎಂದು ಹೇಳಿದ್ದಾರೆ.