ಕಾಡುಕೋಣ ದಾಳಿ: ವ್ಯಕ್ತಿ ಗಂಭೀರ
ಕ.ಪ್ರ.ವಾರ್ತೆ, ಕೊಪ್ಪ, ಏ.12
ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಮೇಲೆ ಕಾಡುಕೋಣ ದಾಳಿ ಮಾಡಿದ ಪರಿಣಾಮ ಕೂಲಿ ಕಾರ್ಮಿಕನೊಬ್ಬನ ಬೆನ್ನು ಮೂಳೆ ಮುರಿದಿರುವ ಘಟನೆ ಶುಕ್ರವಾರ ನಡೆದಿದೆ.
ದಾಳಿಗೊಳಗಾದ ವ್ಯಕ್ತಿ ಬೆತ್ತದಕೊಳಲಿನ ತೋಟದ ಕೂಲಿ ಕಾರ್ಮಿಕ ಕಳಸಪ್ಪ ಗೌಡ (45). ಇವರು ಬೆತ್ತಕೊಳಲಿನಿಂದ ಕೊಗ್ರೆಗೆ ಬರುವ ಮಾರ್ಗದಲ್ಲಿ ಹಠಾತ್ತಾಗಿ ಕಾಡುಕೋಣ ಇವರ ಮೇಲೆ ಎರಗಿ ಹಲ್ಲೆಮಾಡಿದೆ ಎನ್ನಾಲಾಗಿದೆ.
ಇದರಿಂದ ಇವರ ಬೆನ್ನು ಮೂಳೆ ಮುರಿದು ಹೋಗಿ, ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಚಿಂತಾಜನಕ ಪರಿಸ್ಥಿತಿಯಲ್ಲಿದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊಗ್ರೆ, ಎಡಗುಂದ, ಗುಡ್ಡೇತೋಟ ಸುತ್ತಮುತ್ತ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ತೋಟಗಳಲ್ಲಿ ಕೂಲಿಮಾಡುವುದು ಕಷ್ಟವಾಗಿದೆ. ಈ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡುಕೋಣ ದಾಳಿ ಮಾಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.