ಮಾದರಿ ಅಭ್ಯರ್ಥಿಯಾಗುವೆ: ಬಿಎಸ್ಆರ್ನ ಮಂಜುನಾಥ್
ತರೀಕೆರೆ: ಯುವ ಜನಾಂಗದ ಮಾದರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಕೆ. ಮಂಜುನಾಥ್ ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ರಾಮುಲು ಅವರು ತರೀಕೆರೆ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ತಮ್ಮನ್ನು ಗುರುತಿಸಿ ಜನಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಅರ್ಪಿಸಿ, ಜನರ ಸೇವೆ ಸಲ್ಲಿಸಲು ತಾವು ಸದಾ ಸಿದ್ಧ ಎಂದರು.
ಜನರ ಪ್ರೀತಿ ವಿಶ್ವಾಸದಿಂದ ತರೀಕೆರೆ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರಕಿದೆ. ಬಡವರ ಸೇವೆಯೇ ತಮ್ಮ ಮುಖ್ಯ ಗುರಿ. ಬಿಎಸ್ಆರ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಡಿಎಸ್ಎಸ್ ತಾ.ಸಂಚಾಲಕ ಬಾಲರಾಜ್, ಚಂದ್ರಶೇಖರ್, ಅಭಿಷೇಕ್ ಮಧುಸೂಧನ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.