ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉಮಾಪತಿ ಬಿಜೆಪಿಯಿಂದ ಕೆಜೆಪಿ ಸೇರ್ಪಡೆ

Vishwanath S
Updated On : 14 Apr 2013, 1:12 am

ಕ.ಪ್ರ.ವಾರ್ತೆ, ಕಡೂರು, ಏ.13 
ಬಿಜೆಪಿಯಲ್ಲಿ ನಿಷ್ಠೆಯಿಂದ ಸಲ್ಲಿಸಿದ ತಮ್ಮ ಸೇವೆ ಪರಿಗಣಿಸದೇ ಇದ್ದುದರಿಂದ ಹಾಗೂ  ಯಡಿಯೂರಪ್ಪನವರ ನಾಯಕತ್ವ ಮೆಚ್ಚಿಕೊಂಡು ತಾವು ಕೆಜೆಪಿಗೆ ಸೇರ್ಪಡೆಯಾಗಿರುವುದಾಗಿ ಕೆಜೆಪಿಯ ನೂತನ ತಾಲೂಕು ಅಧ್ಯಕ್ಷ ಎಸ್.ವಿ. ಉಮಾಪತಿ ಹೇಳಿದರು.       
 ಕಡೂರು ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 25 ವರ್ಷದಿಂದ  ಬಿಜೆಪಿಯಲ್ಲಿದ್ದು, ಮೂರು ಬಾರಿ ಬಿಜೆಪಿ ತಾಲೂಕು ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಾ ಉತ್ತಮವಾಗಿ ಪಕ್ಷ ಸಂಘಟಿಸಿ ಎಲ್ಲ ಚುನಾವಣೆಯಲ್ಲಿ ಸಕ್ರಿಯವಾಗಿ ದುಡಿದಿದ್ದೇನೆ ಎಂದರು.
ಬಿಜೆಪಿಯಿಂದ ನಿರ್ಲಕ್ಷ್ಯ: ನನ್ನ ಸೇವೆಯನ್ನು ಪಕ್ಷದ ಮುಖಂಡರು ಗುರುತಿಸಿ ಯಾವುದೇ ಜವಾಬ್ದಾರಿಯುತ ಹುದ್ದೆ ನೀಡದಿರುವುದರಿಂದ ಬಿಜೆಪಿ ತೊರೆದು ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಮೆಚ್ಚಿ ಕೆಜೆಪಿ ಸೇರಿರುವುದಾಗಿ ತಿಳಿಸಿದರು.
  ಬಿ.ಎಸ್.ಆರ್. ಕಾಂಗ್ರೆಸ್ ಕೆಜೆಪಿಗೆ ಪ್ರತಿಸ್ಪರ್ಧಿಯಾಗಿದ್ದು, ಪಕ್ಷದ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅತಿಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್, ಮುಖಂಡ ಮೌನೇಶ್, ಶಾಮಿಯಾನ ಚಂದ್ರು, ಆಡಿಗೆರೆ ಮೋಹನ್, ನಾಗರಾಜು, ಎಚ್.ಎಂ. ರೇವಣ್ಣಯ್ಯ, ಶಂಕರಮೂರ್ತಿ, ದೇವರಾಜ್, ಕಂಸಾಗರ ಮಹೇಶ್, ದೇವರಾಜು ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement