ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕ್ಯಾನ್ಸರ್ ತಪಾಸಣೆ

Vishwanath S
Updated On : 14 Apr 2013, 1:13 am

ಚಿಕ್ಕಮಗಳೂರು: ರಾಷ್ಟ್ರೀಯ ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧಿತ (ಸಿವಿಡಿ) ಹಾಗೂ ಪಾರ್ಶ್ವವಾಯು ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಹಾಗೂ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗ ಮತ್ತು ಜೆಸಿಐ ಕಲ್ಪವೃಕ್ಷ ಕಡೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ತಜ್ಞ ವೈದ್ಯರುಗಳಿಂದ ಉಚಿತ ಕ್ಯಾನ್ಸರ್ ರೋಗ ಪತ್ತೆ ಹಚ್ಚುವ ಹಾಗೂ ಸಲಹಾ ಶಿಬಿರವನ್ನು ಏ. 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಚಿನ್ನದ ದರದಲ್ಲಿ ದಾಖಲೆ ಕುಸಿತ
ಬೆಂಗಳೂರು/ನವದೆಹಲಿ: ಇದು “_«Ú­’¥ÚM}ÚÔÚ ವಿಷಯ. ಅದೇನು ಗೊತ್ತಾ?
ಚಿನ್ನದ ದರ ಕಳೆದ ಒಂದು ವರ್ಷದಲ್ಲೇ ಅತಿ ದೊಡ್ಡ ಕುಸಿತ ದಾಖಲಿಸಿದೆ. ಚಿನ್ನ ಕೊಳ್ಳಲು ಪ್ಲ್ಯಾನ್ ಹಾಕಿಕೊಂಡವರಿಗಂತೂ ಇದರಷ್ಟು ಖುಷಿಯ ಸಮಾಚಾರ ಮತ್ತೊಂದಿರಲಿಕ್ಕಿಲ್ಲ. ಏರುತ್ತಲೇ ಸಾಗಿದ್ದ ಹಳದಿ ಲೋಹದ ಬೆಲೆ ಭಾರಿ ಕುಸಿತ ಕಂಡಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿದಿದ್ದೇ ಇದಕ್ಕೆ ಕಾರಣ. ಬೆಂಗಳೂರು ಚಿನಿವಾರ ಪೇಟೆಯಲ್ಲಿ ಶನಿವಾರ ಒಂದೇ ದಿನ ಹಳದಿ ಲೋಹದ ಬೆಲೆ 10 ಗ್ರಾಂಗೆ 934 ಇಳಿಕೆಯಾಗಿದ್ದು, 28,326 ಆಗಿದೆ. ಆಭರಣ ಚಿನ್ನದ ದರ ಗ್ರಾಂಗೆ 2,620 ತಲುಪಿದೆ.
 ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಒಂದೇ ದಿನ ಚಿನ್ನದ ದರ 10 ಗ್ರಾಂಗೆ ಬರೋಬ್ಬರಿ 1,250ರಷ್ಟು ಕುಸಿತವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದರ ಇಳಿಕೆಯಾಗಿದ್ದು ಕಳೆದ ವರ್ಷದ ಏಪ್ರಿಲ್‌ನಲ್ಲಿ. ದೆಹಲಿಯಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ 28,350 ಆಗಿದೆ. ಮುಂಬೈನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. 10 ಗ್ರಾಂ ಸ್ಟ್ಯಾಂ. ಚಿನ್ನದ ದರ 27,880, ಶುದ್ಧ ಚಿನ್ನದ ದರ 28,015 ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement