ಬಿಜೆಪಿ ಸೇರ್ಪಡೆ
ಶೃಂಗೇರಿ: ತಾಲೂಕಿನ ಬೇಗಾರು, ಧರೆ, ಕೆರೆ, ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಕೆಲ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬೇಗಾರು ಪಂಚಾಯಿತಿ ವ್ಯಾಪ್ತಿಯ ಕೆರೆಕೊಡಿಗೆ ನಾಗಪ್ಪಗೌಡ್ರು, ಉಮೇಶ ಮೀಗ, ದುಗ್ಗಪ್ಪ ಮೀಗ, ಗೀತ ಗೋಪಾಲ ಹೆಗ್ಡೆ, ರಾಜಪ್ಪ ಭಂಡಾರಿ, ಶೇಖರ ಪೂಜಾರಿ, ರತ್ನಾಕರ ಶೆಟ್ಟಿ, ಚಿನ್ನಯ ನಾಯ್ಕ, ನರಸಿಂಹನಾಯ್ಕ, ಶಾಮನಾಯ್ಕ, ರಾಮೇಗೌಡ್ರು, ಅಶೋಕ, ಕೆರೆಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಶೀರ್ಲು,ಕಾಂಗ್ರೆಸ್ ಮುಖಂಡ ಜಗದೀಶ, ವಿಜಯ ಎಲ್ಸಾರ್, ನಾಗೇಶ್ ಎಲ್ಸಾರ್, ಸಚಿಂದ್ರ ಹೊಸ್ತೋಟ, ಆನಂದ ಕಲ್ಲು ದೇವಸ್ಥಾನ ಸೇರ್ಪಡೆಗೊಂಡರು.