ಸಂಭ್ರಮದ ಯುಗಾದಿ ಆಚರಣೆ
ತರೀಕೆರೆ: ವಿಜಯನಾಮ ಸಂವತ್ಸರದ ಹೊಸ ವರ್ಷಾಚರಣೆ ಯುಗಾದಿ ಹಬ್ಬವನ್ನು ಮೂರು ದಿನ ಪಟ್ಟಣದಲ್ಲಿ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಮನೆಯನ್ನು ಮಾವಿನ ತೋರಣ, ಬೇವಿನ ಹೂವು ಸೊಪ್ರು, ಬಾಳೆ ಕಂಬಗಳು, ತಳಿರು ತೋರಣಗಳಿಂದ ಶೃಗರಿಸಲಾಗಿತ್ತು. ಬುಧವಾರ ಹಬ್ಬದ ಪ್ರಯುಕ್ತ ನವಗ್ರಹ ಧಾನ್ಯಗಳನ್ನು ದಾನ ಮಾಡಲಾಯಿತು. ಗುರುವಾರ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಟ್ಟು ಮದ್ಯಾನ್ಹ ಬೇವು ಬೆಲ್ಲ ಸೇವಿಸಿ ಹೊಸ ಸಂವತ್ಸರವನ್ನು ಸ್ವಾಗತಿಸಲಾಯಿತು.
ಪಂಚಾಂಗ ವಾಚನ: ಶ್ರೀ ವಿಜಯನಾಮ ಸಂವತ್ಸರದ ಹೊಸ ಪಂಚಾಂಗವನ್ನು ವಾಚನ ಮಾಡಲಾಯಿತು. ಜನರು ಚಂದ್ರದರ್ಶನ ಮಾಡಿ ಪರಸ್ಪರ ಶುಭಾಶಯಗಳನ್ನು ಕೋರಿದರು. ಕಿರಿಯರು ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ನಮಸ್ಕರಿಸಿದರು.
ಪಟ್ಟಣದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುಸಸ್ಕಾರ ಏರ್ಪಡಿಸಲಾಗಿತ್ತು.