'ಕಾಂಗ್ರೆಸ್ ವೈಭವ ಮರುಕಳಿಸುತ್ತಿದೆ'
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.14
ಪಕ್ಷದ ತತ್ವ, ಸಿದ್ಧಾಂತ ಮತ್ತು ಕೇಂದ್ರದ ಜನಪರ ಯೋಜನೆಗಳನ್ನು ಮೆಚ್ಚಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದನ್ನು ಕಂಡರೆ ಹಲವು ದಶಕದ ಹಿಂದಿನ ಗತವೈಭವ ನೆನಪಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ನಗರದ ಕೋಟೆ ಅಗ್ರಹಾರ ರಸ್ತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿ ನಂತರ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಭಾಗ ನಂತರದಲ್ಲಿ ಬಿಜೆಪಿಯ ಬಣ್ಣದ ಮಾತಿಗೆ ಸೋತು ಅಧಿಕಾರಕ್ಕೆ ತಂದಿದ್ದೀರಿ. ಅವರ ಅಧಿಕಾರಾವಧಿಯಲ್ಲಿ ಮಾಡಿರುವ ಸ್ವಜನ ಪಕ್ಷಪಾತ, ಆಪರೇಷನ್ ಕಮಲ, ದೇವರ ಹೆಸರಿನಲ್ಲಿ ಯುವಕರ ಸೆಳೆತ, ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು ಕಂಡು ಮತ್ತೆ ಕಾಂಗ್ರೆಸ್‌ಗೆ ಹಿಂತಿರುಗುತ್ತಿರುವುದು ತೋಳ್ಬಲ ಬಂದಂತಾಗಿದೆ ಎಂದರು.
ನಗರಸಭೆ ಸದಸ್ಯ ಹೆಚ್.ಎಸ್. ಪುಟ್ಟಸ್ವಾಮಿ ಮಾತನಾಡಿ, ಯಾವುದೇ ಹಗರಣ ಮತ್ತು ಆರೋಪಗಳಿಗೆ ತುತ್ತಾಗದ ವ್ಯಕ್ತಿ. ಗುಣ ನಡತೆಯಲ್ಲಿ ಮತ್ತು ಪಕ್ಷದ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಡಜನರಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಶೀರ್ವದಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮುಖಂಡರಾದ ವೆಂಕಟೇಶ್ ನಾಯ್ಡು, ಕೃಷ್ಣಪ್ಪ, ಗಿರಿ, ಸೋಮಶೇಖರ್, ಅಗ್ರಹಾರ ಸತೀಶ್, ಜಯರಾಜನಾಯ್ಡು ಉಪಸ್ಥಿತರಿದ್ದರು.