ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಂಜಾಟದ ನಡುವೆ ಮರೆಯುತ್ತಿರುವ ಕ್ರೀಡಾ ಮನಸ್ಸು

Lingaraj Badiger
Updated On : 15 Apr 2013, 11:08 am

ಕ.ಪ್ರ ವಾರ್ತೆ, ನರಸಿಂಹರಾಜಪುರ, ಏ.14
ಬದುಕಿನ ಜಂಜಾಟದ ನಡುವೆ ಕ್ರೀಡೆ ಹಾಗೂ ಕ್ರೀಡಾ ಮನೋಭಾವವೇ ಕಳೆದುಹೋಗುತ್ತಿದೆ. ಕ್ರೀಡೆಯನ್ನು  ಎಲ್ಲರೂ ಮರೆಯುತ್ತಿದ್ದಾರೆ ಎಂದು ಶೃಂಗೇರಿಯ ವೈದ್ಯಾಧಿಕಾರಿ ಡಾ. ಅನಿತ್ ಕುಮಾರ್ ವಿಷಾದಿಸಿದರು.   
ಅವರು ಭಾನುವಾರ ಕುದುರೆ ಗುಂಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು,  ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಶೃಂಗೇರಿ ಕ್ಷೇತ್ರ ಮಟ್ಟದ ಕೆಸರು ಗದ್ದೆ ಓಟ ಹಾಗೂ ಕೆಸರುಗದ್ದೆಯಲ್ಲಿ  ಹಗ್ಗ ಜಗ್ಗಾಟ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪ ತಾಲೂಕಿನ ಕರಿಗೆರಿಸಿ ಪ್ರಗತಿಪರ ಕೃಷಿಕರಾದ ಎಂ.ಜಿ. ಶಂಕರ್ ಮಾತನಾಡಿ, ಮಲೆನಾಡಿನ ಭಾಗದಲ್ಲಿ ಕೌಶಲ್ಯದ ಕೊರತೆ ಇದೆ. ಧ.ಗ್ರಾ ಯೋಜನೆಯವರು ಮಹಿಳೆಯರಿಗೆ ಈ ಬಗ್ಗೆ ತರಬೇತಿ ನೀಡಬಹುದು. ರಾಷ್ಟ ಹಾಗೂ ರಾಜ್ಯ ಮಟ್ಟದ ಕ್ರೀಡಾಪಟುಗಳು ಮಲೆನಾಡಿನ ಭಾಗದಲ್ಲಿ ಕಡಿಮೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡವುದು ಅಗತ್ಯ ಎಂದರು.
ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಎ.ಎಸ್. ಸುಕೇಶ್, ತಲಮಕ್ಕಿ ಒಕ್ಕೂಟದ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು. ಗಣೇಶ್ ಪ್ರಾರ್ಥಿಸಿದರು. ಧ.ಗ್ರಾ ಯೋಜನೆಯ ಕುದುರೆಗುಂಡಿ ವಲಯ ಮೇಲ್ವೀಚಾರಕಿ ಮಂಜುಳಾ ಸ್ವಾಗತಿಸಿ, ಕುಸುಮಕರ್ ಕಾರ್ಯಕ್ರಮ ನಿರೂಪಿಸಿ, ಕೇಶವ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ನರಸಿಂಹರಾಜಪುರದ ಸಾಹಿತಿ ಎಂ. ಜಯಮ್ಮ ಮಾತನಾಡಿ, ಮಕ್ಕಳು ಟಿ.ವಿ, ಮೊಬೈಲ್, ಕಂಪ್ಯೂಟರ್ ಕಡೆಗೆ ಹೆಚ್ಚು ಗಮನ ನೀಡುತ್ತಿರುವುರಿಂದ  ಕ್ರೀಡೆ ಮರೆಯಾಗುವ ಅಪಾಯವಿದೆ. ಗ್ರಾಮೀಣ ಸೊಗಡಿನ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಅಗತ್ಯ. ಕ್ರೀಡಾ ಸ್ಪರ್ಧೆ ಯುದ್ಧವಾಗಬಾರದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪ ಸಹಕಾರ ಸಾರಿಗೆ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ವಹಿಸಿದ್ದರು. ತೀರ್ಪುಗಾರರಾದ ಸುರೇಶ್, ರಜಾಕ್, ಯೋಜನಾಧಿಕಾರಿ ಎಂ.ಎಸ್. ಸುಕೇಶ್ ಉಪಸ್ಥಿತರಿದ್ದರು.
ಗೆದ್ದ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಮಹಿಳೆಯರ 30 ತಂಡ ಹಾಗೂ ಪುರುಷರ 30 ತಂಡಗಳು ಕೆಸರು ಗದ್ದೆಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಜೇತರಾದವರು: ಪುರುಷರ ವಿಭಾಗ- ಕೆಸರು ಗದ್ದೆಯಲ್ಲಿ 100 ಮೀ ಓಟ- ಪ್ರಥಮ ಸೀತೂರು ಕಾರ್ಯಕ್ಷೇತ್ರದ  ಯೋಗೀಶ್, ದ್ವಿತೀಯ ಸೀತೂರು ಕಾರ್ಯಕ್ಷೇತ್ರದ ಶ್ರೀಕಾಂತ್, ಕೆಸರುಗದ್ದೆಯಲ್ಲಿ ಹಗ್ಗ ಜಗ್ಗಾಟ- ಪ್ರಥಮ ಬೆಳ್ಳೂರು ಕಾರ್ಯಕ್ಷೇತ್ರದ ತಂಡ, ದ್ವಿತೀಯ ಬಾಳೆ ಕಾರ್ಯಕ್ಷೇತ್ರದ ತಂಡ.  
ಮಹಿಳೆಯರ ವಿಭಾಗ- ಕೆಸರು ಗದ್ದೆಯಲ್ಲಿ 100 ಮೀ. ಓಟ ಪ್ರಥಮ ಚಾವಲ್ಮನೆ ಕ್ಷೇತ್ರದ ನಯನ, ದ್ವಿತೀಯ ಮೆಣಸೂರು ಕ್ಷೇತ್ರದ ಪುಷ್ಪ. ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಪ್ರಥಮ ಶಾನುವಳ್ಳಿ ಕ್ಷೇತ್ರ ಹಾಗೂ ಶೆಟ್ಟಿಕೊಪ್ಪ ಕ್ಷೇತ್ರ ದ್ವಿತೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement