ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನ ಮಾನ ಹರಾಜು ಹಾಕಿದ ಬಿಜೆಪಿ

Lingaraj Badiger
Updated On : 15 Apr 2013, 11:01 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಏ.14
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಮಾಡಿರುವ ಕೆಟ್ಟ ಕೆಲಸಗಳಿಗೆ ಸಾಮಾನ್ಯ ಜನರ ಮಾನ ಹರಾಜು ಹಾಕಿದಂತಾಗಿದೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಆರೋಪಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸೀಮೆಎಣ್ಣೆ, ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ ಸೇರಿದಂತೆ ಗಹೋಪಯೋಗಿ ವಸ್ತುಗಳ ಬೆಲೆ ಏರಿಕೆ ಮೂಲಕ ಕಾಂಗ್ರೆಸ್ ಪಕ್ಷ ಬಡವರು ತಿನ್ನೋ ಅನ್ನಕ್ಕೆ ಕಲ್ಲು ಹಾಕುತ್ತಿದೆ. ಇತ್ತ ರಾಜ್ಯದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ, ಅಶ್ಲೀಲ ಚಿತ್ರ ವೀಕ್ಷಣೆ, ಮಹಿಳೆ ಮೇಲೆ ದೌರ್ಜನ್ಯ, ಈ ರೀತಿ ಹತ್ತು ಹಲವು ಪ್ರಕರಣಗಳಲ್ಲಿ ಬಾಗಿಯಾಗಿ ಮುಖ್ಯಮಂತ್ರಿ ಆದಿಯಾಗಿ ಜೈಲು ಸೇರುತ್ತಿರುವುದನ್ನು ಕಂಡ ಜನ ರಾಜಕಾರಣಿಗಳನ್ನು ಕೆಟ್ಟದ್ದಾಗಿ ನೋಡುತ್ತಿದ್ದಾರೆ ಎಂದರು.
ನಿಡಘಟ್ಟ ಬೆಸ್ತರಹಟ್ಟಿಯ ಆಂಜನೇಯ ಶಿಳ್ಳೆಖ್ಯಾತ ಯುವ ಅಭಿವೃದ್ಧಿ ಸಂಘದ ಹಲವರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.
ಮುಖಂಡರಾದ ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಎಂ.ಡಿ. ರಮೇಶ್, ಜಯರಾಜ್ ಅರಸ್, ಸಂಪತ್ ಕುಮಾರ್, ರವಿ, ನಾಗರಾಜ್, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್. ಅನಿಲ್ ಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement