ನಿಷೇಧವಿದ್ದರೂ ಮಾಂಸ ಮಾರಾಟ
ಕೊಪ್ಪ: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಪಪಂ ವ್ಯಾಪ್ತಿಯಲ್ಲಿ ಪ್ರಾಣಿ ಹಿಂಸೆ ನಿಷೇಧಿಸಿರುವುದರಿಂದ ಭಾನುವಾರ ಪ್ರಾಣಿವಧೆ ಮತ್ತು ಮಾಂಸ ಮಾರಟ ನಿಷೇಧಿಸಲಾಗಿತ್ತು.
ಆದರೆ ಪಪಂ ನೀಡಿದ ಪ್ರಕಟಣೆಗೆ ಪಟ್ಟಣದ ಮಾಂಸದ ಅಂಗಡಿ ಮಾಲೀಕರು ಕಿಮ್ಮತ್ತಿನ ಬೆಲೆ ಕೊಡದೇ ಪಟ್ಟಣದಲ್ಲಿ ಬಹುತೇಕ ಕೋಳಿ ಮಾಂಸದ ಅಂಗಡಿಗಳ ಬಾಗಿಲು ತೆಗೆದು ಮಾಂಸ ಮಾರಾಟ ಮಾಡಿದರೆ, ಕುರಿ ಮಾಂಸದ ಅಂಗಡಿಗಳು ಅರ್ಧ ಬಾಗಿಲು ತೆಗೆದು ಮಾಂಸ ಮಾರಾಟ ಮಾಡಿದರು.