ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಎಸ್ಸಾರ್ ಕಾಂಗ್ರೆಸ್ ಪದಾಧಿಕಾರಿಗಳ ರಾಜಿನಾಮೆ

Lingaraj Badiger
Updated On : 15 Apr 2013, 11:01 am

ಕ.ಪ್ರ.ವಾರ್ತೆ, ಕಡೂರು,  ಏ.14
ಬಿಎಸ್‌ಆರ್ ಪಕ್ಷದ ಎಲ್ಲ ಪಧಾಧಿಕಾರಿಗಳು ಸಾಮೂಹಿಕ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಸೇರಿ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್‌ರ ಗೆಲವಿಗೆ ದುಡಿಯುವುದಾಗಿ ಮುಖಂಡ ಯರದಕೆರೆ ಎಂ. ರಾಜಪ್ಪ ಹೇಳಿದ್ದಾರೆ.
ಅವರು ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್‌ಆರ್ ಪಕ್ಷವನ್ನು ನಾನು ಹಾಗೂ ನನ್ನ ಸ್ನೇಹಿತ ಕೆ.ಹೆಚ್. ಶಂಕರ್ ಸೇರಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ದೊಡ್ಡಮಟ್ಟದಲ್ಲಿ ಬೆಳೆಸಿದ್ದೆವು. ಪಕ್ಷದ ಮಹಿಳಾ ಘಟಕ ಸೇರಿದಂತೆ ಎಲ್ಲ ರೀತಿಯ ಸಮಿತಿಗಳನ್ನು ಮಾಡಿ ಪಕ್ಷ ಸಂಘಟನ ಮಾಡಿದ್ದೆವು. ಕಡೂರು ಹಾಗು ಬೀರೂರು ಪಟ್ಟಣದಲ್ಲಿಯೂ ಕೂಡ ಕಳೆದ ಪುರಸಭಾ ಚುನಾವಣೆಯಲ್ಲಿ ಪಕ್ಷದಿಂದ ಯಾವುದೇ ಹಣ ನೀಡದೇ ಇದ್ದರೂ ಸಹ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುಅಭ್ಯರ್ಥಿಗಳು ಹೆಚ್ಚಿನ ಮತ ಗಳಿಸಿದ್ದು ಪಕ್ಷದ ಮುಖಂಡರಿಗೆ ತಿಳಿದಿದೆ.
ಆದರೆ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯಾಗಿದ್ದ ಟಿಕೆಟ್ ನೀಡದಿರುವುದರಿಂದ ಪಕ್ಷದ ಪದಾಧಿಕಾರಿಗಳ ಘಟಕದ ವಿವಿಧ ಸಮಿತಿಗಳ ಮುಖಂಡರು ಸಾಮೂಹಿಕವಾಗಿ ರಾಜಿನಾಮೆ ಸಲ್ಲಿಸಿದ್ದೇವೆ ಎಂದರು.                               
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ. ಆ ಮೂಲಕ ಕಾಂಗ್ರೆಸ್ ಪಕ್ಷದಿಂದ ಸಮರ್ಥ ಅಭ್ಯರ್ಥಿಯಾಗಿರುವ ಕೆ.ಬಿ. ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಿ ಎಲ್ಲ ಮುಖಂಡರು ಹಾಗು ಕಾರ್ಯಕರ್ತರು ಸಂಘಟಿತರಾಗಿ ದುಡಿಯುವ ಮೂಲಕ ಗೆಲವಿಗೆ ದುಡಿಯುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಂಸಾಗರ ನಾಗರಾಜು, ಮಹೇಶ್, ಬಿ.ಕೆ.ಪ್ರಭು, ಚಂದ್ರನಾಯ್ಕ, ಲೋಹಿತ್, ಕೆ.ಹೆಚ್. ಉಮಾ, ಮುಕ್ತಿಯಾರ್, ಸಲೀಂ, ಇಬ್ರಾಹಿಂ, ಶೋಭಾ, ವಿ.ಎಂ. ಮಲ್ಲಪ್ಪ, ವೀಣಾ, ಮುನ್ನ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement