18ರಿಂದ ಉದ್ದಾಂಜನೇಯ ಸ್ವಾಮಿ ಜಾತ್ರೆ
ಭದ್ರಾವತಿ: ಇಲ್ಲಿನ ಗ್ರಾಮಾಂತರ ಭಾಗವಾದ ಗಂಗೂರು ಸಮೀಪದಲ್ಲಿರುವ ಸುಮಾರು 800 ವರ್ಷದ ಇತಿಹಾಸವಿರುವ ಉದ್ದಾಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ಏ. 18 ರಿಂದ 20ರವರೆಗೆ ನಡೆಯಲಿದೆ. ಜಾತ್ರೆ ಸಂದರ್ಭದಲ್ಲಿ ದೇವರಿಗೆ ವಿವಿಧ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 18 ಹಾಗೂ 19 ರಂದು ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಹೋಮ ಹವನಗಳು ನಡೆಯಲಿದ್ದು, 20 ರಂದು ಆಶ್ಲೇಷಾಬಲಿ ನಡೆಯಲಿದೆ. ಹೋಮ ಹವನಗಳ ನೇತೃತ್ವವನ್ನು ಅಶೋಕ ಗಣಪತಿ ಶರ್ಮ ಅವರು ವಹಿಸಲಿದ್ದಾರೆ. ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.