21ಕ್ಕೆ ನೆಮ್ಮಾರ್ ವಿಶೇಷ ಉರೂಸ್
ಶೃಂಗೇರಿ: ತಾಲೂಕಿನ ನೆಮ್ಮಾರಿನ ಪ್ರಸಿದ್ಧ ಸೂಫಿ ಸಂತ ಹಜರತ್ ದಿಲಾವರುಷ ಔಲಿಯಾ ದರ್ಗಾದಲ್ಲಿ 21 ರಂದು ವಿಶೇಷ ಉರೂಸ್ ನಡೆಯಲಿದೆ.
ಉರೂಸ್ ಅಂಗವಾಗಿ ಸಂಜೆ 5 ಗಂಟೆಗೆ ದರ್ಗಾ ಮುಂಭಾಗದಿಂದ ಸಂದಲ್ ಮೆರವಣಿಗೆ ಹೊರಡಲಿದೆ.ನಂತರ ವಿಶೇಷ ಪ್ರಾರ್ಥನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಶಿವಮೊಗ್ಗದ ಜನಾಬ್ ಅಬ್ದುಲ್ ರೆಝಾಕ್ ತಂಡದವರಿಂದ ವಿಶೇಷ ಝರಬ್ ಕಾರ್ಯಕ್ರಮ, ಶಿವಮೊಗ್ಗದ ಮುಭಾಲ್ಲಿಗಿನ್ ಸುನ್ನಿ ದಾವತೆ ಇಸ್ಲಾಮಿ ತಂಡದವರಿಂದ ನಾಥ್,ಬಯಾನಾಥ್, ತರ್ಬಿಯತ್ ಇಸ್ತಿಮಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಲಿರುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.