ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದು ಬಿಜೆಪಿ ಅಭ್ಯರ್ಥಿ ನಾಮಪತ್ರ

Lingaraj Badiger
Updated On : 16 Apr 2013, 10:48 am

ತರೀಕೆರೆ: ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ  ಟಿ.ಜೆ.ಅವಿನಾಶ್ 16 ರಂದು ಪಕ್ಷದ ಮುಖಂಡರು, ಬೆಂಬಲಿಗರೊಡನೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಜಿ. ಸದಾನಂದ್ ತಿಳಿಸಿದ್ದಾರೆ.
ಜೀವರಾಜ್ ಸೇರಿ ಮೂವರ ನಾಮಪತ್ರ
ಕೊಪ್ಪ: ಶೃಂಗೇರಿ ಕ್ಷೇತ್ರದಲ್ಲಿ ಸೋಮವಾರ 3 ಅಭ್ಯರ್ಥಿಗಳಿಂದ 5 ನಾಮ ಪತ್ರ ಸಲ್ಲಿಸಿದ್ದಾರೆ  ಎಂದು ಚುನಾವಣಾ ಅಧಿಕಾರಿ ರತ್ನಾಕರ್ ನಾಯ್ಕ ತಿಳಿಸಿದ್ದಾರೆ.  ಪಕ್ಷೇತರ ಅಭ್ಯರ್ಥಿ ಮಡಬೂರ ಕೇಸಕ್ಕಿ ಗ್ರಾಮದ ಕೆ.ಸಿ. ಪ್ರಕಾಶ್ ನಾಮ ಪತ್ರನಲ್ಲಿಸಿದ ನಂತರ 5ನೇ ಬಾರೀಗೆ ಬಿಜೆಪಿ ಅಭ್ಯರ್ಥಿಯಾಗಿ  ಡಿ.ಎನ್. ಜೀವರಾಜ್ ತಮ್ಮ ಪತ್ನಿ ನಿವೇದಿತಾ ಮತ್ತು ಪಕ್ಷದ ಕ್ಷೇತ್ರಾಧ್ಯಕ್ಷ ನೀಲೇಶ್ ಹಾಗೂ ತರೀಕೇರೆ ಮಂಜುನಾಥ ರೊಂದಿಗೆ ನಾಮಪತ್ರ ಸಲ್ಲಿಸಿದರು. ನಂತರ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ನಾಮಪತ್ರ ಸಲ್ಲಿಸಿದರು.
ಬಿ.ಬಿ. ನಿಂಗಯ್ಯ ಜೆಡಿಎಸ್ ಸೇರ್ಪಡೆ
ಮೂಡಿಗೆರೆ: ಬೆಂಬಲಿಗರ ಒತ್ತಾಯದ ಮೇರೆಗೆ ಜೆಡಿಎಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿ, ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿರುವುದಾಗಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭೆ, ತಾಪಂ ಮತ್ತು ಗ್ರಾಪಂ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮಿಂದ ಕಾಂಗ್ರೆಸ್ ಲಾಭ ಪಡೆದಿದೆ. ತಮ್ಮ ಸಹಕಾರ ಇಲ್ಲದಿರುತ್ತಿದ್ದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಸ್ವಾರ್ಥ ರಹಿತ, ಪ್ರಾಮಾಣಿಕತೆಯಿಂದ ಸಕ್ರಿಯವಾಗಿ ಶ್ರಮಿಸಿದ್ದ ತನಗೆ ಪಕ್ಷ ತ್ಯಜಿಸುವ ನಿರ್ಧಾರ ತಳೆಯಬೇಕಾಯಿತು ಎಂದರು.  ಗೋಷ್ಠಿಯಲ್ಲಿ ಹಮ್ಮಬ್ಬ, ನಾರಾಯಣಗೌಡ, ರತನ್, ಲಕ್ಷ್ಮಣಗೌಡ, ನಾಗೇಶ್ ಗೌಡ, ಬಾಳೂರು ಅಶ್ವಥ್, ರಾಮಪ್ಪ, ಕೃಷ್ಣಪ್ಪ, ಉದಯಕುಮಾರ್ ಇದ್ದರು.
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಕಡೂರು: ಬಿಜೆಪಿ ಅಭ್ಯರ್ಥಿ ಬೀರೂರು ದೇವರಾಜು ಬೆಳಿಗ್ಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಟ್ಟಣದ ಬಿಜೆಪಿ ಕಚೇರಿಯಿಂದ ಶಾಸಕ ಡಾ.ವೈ.ಸಿ. ವಿಶ್ವನಾಥ್, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬಿಜೆಪಿ ಮುಖಂಡ ಕಾಮನಕೆರೆ ಶಶಿಧರ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರಾಣೇಶ್, ಕೆ.ಎಚ್. ಶಂಕರ್ ಸೇರಿದಂತೆ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವನಾಥ್ ಮಾತನಾಡಿ, ಬಿಜೆಪಿ ಸರ್ಕಾರದಿಂದ ಕ್ಷೇತ್ರದಲ್ಲಿ ಕೈಗೊಂಡಿರುವ ಕೋಟ್ಯಂತರ ಅಭಿವೃದ್ಧಿ ಕೆಲಸಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಲಿ ಎಂದರು. ಪ್ರಾಣೇಶ್, ಶಂಕರ್, ಕಾಮನಕೆರೆ ಶಶಿಧರ್, ರೇಖಾ ಹುಲಿಯಪ್ಪಗೌಡ, ಆನಂದ್, ರಮೇಶ್, ರುದ್ರೇಗೌಡ, ಟೊಮೆಟೋಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement