'ಕಡೂರಿನಲ್ಲಿ ಕಾಂಗ್ರೆಸ್ ಅಲೆ'
ಕಡೂರು: ಕ್ಷೇತ್ರದಲ್ಲಿ ಈ ಭಾರಿ ಕಾಂಗ್ರೆಸ್ ಅಲೆ ಇದ್ದು ಮತದಾರರು ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ ಬೀರೂರು ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕಡೂರು ಪಟ್ಟಣದಲ್ಲಿ ಆರಂಭಿಸಿದ ಕಾಂಗ್ರೆಸ್ ಚುನಾವಣಾ ಪ್ರಚಾರದ ಕಚೇರಿಯಿಂದ ಕಾರ್ಯಕರ್ತರೊಂದಿಗೆ ಮರವಣಿಗೆಯ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು.
ಬೆಂಬಲಿಗರಾದ ಮಹೇಶ್ ಒಡೆಯರ್, ಆನಂದ್, ಮರುಳಸಿದ್ದಪ್ಪ, ಎಂ.ಎಚ್. ಚಂದ್ರಪ್ಪ, ಹೂವಿನ ಗೋವಿಂದಪ್ಪ, ಮಾಣಿಕ ಬಾಷಾರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಜನ ಸಾಮಾನ್ಯರ ಒಡನಾಡಿಯಾಗಿ ಅವರ ನೋವು ನಲಿವುಗಳಿಗೆ ಸ್ಪಂದಿಸುವ ತನ್ನನ್ನು ಜನತೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಕಡೂರು ಬ್ಲಾಕ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಆನಂದ್, ಎಚ್.ಎಂ. ಲೋಕೇಶ್, ಮರುಳಸಿದ್ದಪ್ಪ, ಮಾಣಿಕಭಾಷಾ, ಹೂವಿನ ಗೋವಿಂದಪ್ಪ, ಕೆ.ಎನ್. ಬೊಮ್ಮಣ್ಣ, ಯರದಕೆರೆ ಎಂ. ರಾಜಪ್ಪ, ಕೆ.ಎನ್. ಜಯಣ್ಣ, ಡಿಸಿಎನ್.ಶೇಖರಪ್ಪ, ಜಿ.ಟಿ. ಬಸವರಾಜು, ಶೆಟ್ಟಿಹಳ್ಳಿ ಮಲ್ಲಿಕಾರ್ಜುನ್ ಇದ್ದರು.