ಕಾಂಗ್ರೆಸ್ ಗೆಲವು ಖಚಿತ: ಮೋಟಮ್ಮ
ಮೂಡಿಗೆರೆ: ಕಾಂಗ್ರೆಸ್ ಸರ್ಕಾರ ಒಳ್ಳೆಯ ಹೆಸರನ್ನು ಗಳಿಸಿದೆ. ಆ ಹೆಸರಿಗೆ ಬಿಜೆಪಿ ಮಸಿ ಬಳೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ವ್ಯಂಗ್ಯವಾಡಿದರು.
ಸೋಮವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ನಡೆಸಿದ ಐದು ವರ್ಷಗಳ ಆಡಳಿತದಲ್ಲಿ ಬೇಸತ್ತು ಜನ ಕಾಂಗ್ರೆಸ್ ಆಡಳಿತ ಬಯಸಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದಲೂ ಹಗಲು ದರೋಡೆ ಮಾಡುತ್ತಲೇ ಬಂದಿದೆ ಎಂದು ಹೇಳಿದರು. ನಂತರ ಕಾಂಗ್ರೆಸ್ ಮುಖಂಡರೊಂದಿಗೆ ತಾಲೂಕು ಕಚೇರಿಗೆ ತೆರಳಿ ಅಭ್ಯರ್ಥಿ ಚಂದ್ರಪ್ಪ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ನ ಬಿ.ಎಲ್. ರಾಮ್ದಾಸ್, ಕೆಪಿಸಿಸಿ ಮಾಜಿ ಸದಸ್ಯ ಹಾಲಪ್ಪಗೌಡ, ಜಿಪಂ ಸದಸ್ಯ ಎಂ.ಎಸ್. ಅನಂತ್, ಸವಿತಾ ರಮೇಶ್, ಜೋತಿ ಹೇಮಶೇಖರ್, ತಾಪಂ ಸದಸ್ಯ ಸಬ್ಲಿ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು, ಕಾಯದರ್ಶಿ ಸಂಪತ್ ಕುಮಾರ್, ಕೆ. ವೆಂಕಟೇಶ್, ಮನೋಜ್, ಶಿವಣ್ಣ, ಮಂಚೇಗೌಡ, ನಾಗರತ್ನ ಇದ್ದರು.