ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕೆಜೆಪಿ ಗೆಲವು ಖಚಿತ'

Lingaraj Badiger
Updated On : 16 Apr 2013, 10:47 am

ಕಡೂರು: ಜನರ ಕಷ್ಟಕ್ಕೆ ಸ್ಪಂದಿಸುವ, ಕ್ಷೇತ್ರದ ಜನರ ಸೇವೆ ಮಾಡುತ್ತಿರುವ ತಮಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹೇಳಿದರು.
 ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಸಿಂಗಟಗೆರೆಯ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಕಚೇರಿವರೆಗೆ ಸಾಗಿದರು. ನಂತರ ಕೆಜೆಪಿ ಕಡೂರು ಹಾಗೂ ಬೀರೂರು ಘಟಕಗಳ ಅಧ್ಯಕ್ಷರಾದ ಎಸ್.ವಿ.  ಉಮಾಪತಿ, ರವಿಕುಮಾರ್‌ರೊಂದಿಗೆ  ನಾಮಪತ್ರ ಸಲ್ಲಿಸಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್, ಕಳೆದ 13 ವರ್ಷದಿಂದ ಕ್ಷೇತ್ರದ ರಾಜಕಾರಣದಲ್ಲಿರುವ ನಾನು ಜನರ ಕಷ್ಟಗಳ ಅರಿವು ಇದ್ದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ತಮಗೆ ಜನರ ಅಭಿಮಾನವೇ ನನಗೆ ಆಸ್ತಿಯಾಗಿದೆ ಎಂದರು.  ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜನ ಸಾಮಾನ್ಯರ ಪರ ರೂಪಿಸಿದ ಕಾರ್ಯಕ್ರಮಗಳು ಕೆಜೆಪಿ ಗೆಲುವು ಸಾಧಿಸಲು ಕಾರಣವಾಗಲಿದೆ ಎಂದು ಹೇಳಿದರು. ಕೆಜೆಪಿ ತಾಲೂಕು ಅಧ್ಯಕ್ಷ ಎಸ್.ವಿ. ಉಮಾಪತಿ, ರವಿಕುಮಾರ್, ಕೆ.ಬಿ. ಸೋಮೇಶ್, ನಾಗರತ್ನ, ಪುಷ್ಪಲತಾ ಸೋಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement