ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀತಿ ಸಂಹಿತೆ ಉಲ್ಲಂಘನೆ; ಅಧಿಕಾರಿಗಳ ಮೌನ

Lingaraj Badiger
Updated On : 16 Apr 2013, 10:47 am

ಕ.ಪ್ರ.ವಾರ್ತೆ, ಮೂಡಿಗೆರೆ,  ಏ.15
ಮೀಸಲು ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಎಡೆಬಿಡದೆ ನಡೆಯುತ್ತಿದ್ದರೂ ಚುನಾವಣಾ ಅಧಿಕಾರಿಗಳು ವಿವಿಧ ಪಕ್ಷಗಳೊಂದಿಗೆ ಶಾಮಿಲಾಗಿ ದಾಖಲಿಸಿಕೊಳ್ಳದಿರುವ ಕುರಿತು ಸಾರ್ವಜನಿಕರು ಅಸಹನೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಮೆರವಣಿಗೆ ತೆರಳುತ್ತಿದ್ದಾಗ ಅನುಮತಿ ರಹಿತ ಬ್ಯಾಂಡ್‌ಸೆಟ್ ತಂಡವನ್ನು ವೃತ್ತ ನಿರೀಕ್ಷಕ ರಮೇಶ್ ವಶಕ್ಕೆ ಪಡೆದು ಕೆಲವು ಸಮಯ ಠಾಣೆಯಲ್ಲಿ ಕುಳ್ಳಿರಿಸಿದ ಬಳಿಕ ಪ್ರಕರಣ ದಾಖಲಿಸದೆ ಬಿಟ್ಟು ಕಳಿಸಿರುವುದು ಈ ಅಧಿಕಾರಿಗಳ ಮೇಲೆ ಶಂಕೆ ಬಲಗೊಳ್ಳಲು ಕಾರಣವಾಗಿದೆ.
ಮೂಡಿಗೆರೆ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಉಪವಿಭಾಗಾಧಿಕಾರಿಯಾಗಿ  2 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಶಾಂತ್ ಮತ್ತು ವೃತ್ತ ನಿರೀಕ್ಷಕ ರಮೇಶ್ ವಿರುದ್ಧ ಇದೇ ರೀತಿಯ ಸಾಕಷ್ಟು ಆರೋಪಗಳು ವ್ಯಕ್ತವಾಗುತ್ತಿರುವುದರಿಂದ ಈ ಇಬ್ಬರು ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ಅಕ್ರಮ ತಡೆ ಅಸಾದ್ಯ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement