ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿಯಿಂದ ಜನರಿಗೆ ದ್ರೋಹ

Lingaraj Badiger
Updated On : 16 Apr 2013, 10:47 am

ಕ.ಪ್ರ.ವಾರ್ತೆ, ಕೊಪ್ಪ,  ಏ.15
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜನರ ಸಮಸ್ಯೆ ಬಗೆಹರಿಸದೇ ತಮ್ಮ ಮಂತ್ರಿ ಮತ್ತು ಶಾಸಕರ ಕಿತ್ತಾಟ ಬಗೆಹರಿಸುತ್ತಾ ಕೇಶವ ಕೃಪಾ ಮತ್ತು ರೇಸಾರ್ಟ್‌ಗಳಲ್ಲಿ ಕಾಲಕಳೆಯುವ ಮೂಲಕ ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ವಿಪ ಪ್ರತಿಪಕ್ಷದ ನಾಯಕಿ ಮೋಟಮ್ಮ ಆರೋಪಿಸಿದರು.
ಸೋಮವಾರ ಪುರಸ ಭಾಕ್ರೀಡಾಂಗಣದಲ್ಲಿ ಶೃಂಗೇರಿ ಕ್ಷೇತ್ರ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಮಂತ್ರಿಗಳು ಮತ್ತು ಶಾಸಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಗಣಿ, ಅರಣ್ಯ ಸಂಪತ್ತು ಲೂಟಿ ಮಾಡಿ, ಡಿನೋಟಿಫೀಕೇಷನ್‌ನಲ್ಲಿ ಭೂಕಬಳಿಕೆಯಂತಹ ಕೆಲಸ ಮಾಡಿ ರಾಜ್ಯದ ಇತಿಹಾಸದಲ್ಲಿ ಕಂಡು ಅರಿಯದ ಭ್ರಷ್ಟಾಚಾರ ನಡೆಸಿದ್ದಾರೆ ಎಂದರು.
ಪ್ರಾಮಾಣಿಕ ಪ್ರಯತ್ನ: ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಾಂಗ್ರೆಸ್ ನಾಯಕರ ಶ್ರಮದ ಪ್ರತಿಫಲವಾಗಿ ಅಡಕೆ ಹಳದಿ ರೋಗ ಸಂತ್ರಸ್ತರ ಪರವಾದ ಗೋರಕ್ ಸಿಂಗ್ ವರದಿಯ 10 ಅಂಶದ ಪೈಕಿ 9 ಅಂಶಗಳನ್ನು ಜಾರಿಗೆ ತಂದಿದ್ದು ಇನ್ನೂ ಉಳಿದಿರುವ ಅಡಕೆ ಬೆಳೆಗಾರ ಸಾಲಮನ್ನಾದ ಪ್ಯಾಕೇಜನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರದ ನಾಯಕರು ಮಾಡುತ್ತಿದ್ದಾರೆ ಎಂದರು.
ಅದರೆ ರಾಜ್ಯದಿಂದ ಅಡಕೆ ಬೆಳೆಗಾರರ ಸಹಾಯಕ್ಕೆ ಯಾವುದೇ ಪ್ಯಾಕೆಜ್ ನೀಡದೇ ಕೇಂದ್ರದ ಮೇಲೆ ದೂರುವ ನೈತಿಕ ಹಕ್ಕಿಲ್ಲ. ರಾಜ್ಯ ಬಜೆಟ್‌ನಲ್ಲಿ ಮಠ ಮಂದಿರಗಳಿಗೆ ಹಣ ನೀಡುವ ಸಮಯದಲ್ಲಿ ರಾಜ್ಯದ ಸಂಕಷ್ಟದ ರೈತರು ನೆನಪಿಗೆ ಬಾರದೇ ಇರುವುದು ವಿಷಾದನೀಯ ಎಂದರು.
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ನಾಮಪತ್ರ ಸಲ್ಲಿಸಿದ ನಂತರದಲ್ಲಿ ಸಭೆಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ ಇರುವ ಎಲ್ಲಾ ಸಮಸ್ಯೆಯ ಅರಿವು ನನಗಿದೆ ಇದಕ್ಕೆ ತಕ್ಕ ಪರಿಹಾರ ಕಲ್ಪಿಸುವ ರೂಪುರೇಷೆ ತಯಾರು ಮಾಡಿದ್ದು ಇವುಗಳನ್ನು ಕಾರ್ಯರೂಪಕ್ಕೆ ತರಲು ನನಗೆ ಈ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮೆಲ್ಲರ ಬೆಂಬಲ ಬೇಕಾಗಿದೆ ಎಂದರು.    
ಅಧ್ಯಕ್ಷತೆಯನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಜಿಲ್ಲಾ ಉಪಾಧ್ಯಕ್ಷ ಎಚ್.ಜಿ. ವೆಂಕಟೇಶ, ಎಚ್.ಎಂ. ನಟರಾಜ್, ಮೀಗಾ ಚಂದ್ರಶೇಖರ್, ಜಿಪಂ ಸದಸ್ಯ ಅದಿಲ್, ಸಚಿನ್ ಮೀಗಾ, ನಿಖಿಲ್, ಸೆಲ್ವಂ, ಜೂಲಿಯನಾ ಫೆರ್ನಾಂಡಿಸ್. ಅಸಗೋಡು ನಾಗೇಶ್, ಡಾ. ಅಂಶುಮಂತ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement