ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಗ್ರ ನೀರಾವರಿ ಪ್ರಮುಖ ಉದ್ದೇಶ: ನೀಲಕಂಠಪ್ಪ

Lingaraj Badiger
Updated On : 16 Apr 2013, 10:53 am

ಕ.ಪ್ರ ವಾರ್ತೆ, ತರೀಕೆರೆ, ಏ.15
ಇಡೀ ತಾಲೂಕನ್ನು ಸಮಗ್ರ ನೀರಾವರಿಯನ್ನಾಗಿಸುವುದೇ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಉದ್ದೇಶವಾಗಿದೆ ಎಂದು ತರೀಕೆರೆ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಚ್.ಎಸ್. ನೀಲಕಂಠಪ್ಪ (ಕೆ. ಹೊಸೂರು) ತಿಳಿಸಿದ್ದಾರೆ.
ಅವರು ತರೀಕೆರೆ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಬೆಂಬಲಿಗರೊಡನೆ ಮಿನಿ ವಿಧಾನಸೌಧಕ್ಕೆ  ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಏರ್ಪಾಡಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
2010ರಿಂದ ಭದ್ರಾ ಮೇಲ್ದಂಡೆ ಯೋಜನೆ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ತಾಲೂಕಿನಲ್ಲಿ ಹೆಚ್ಚಿನದಾಗಿ  ನೀರಿನ ಸಮಸ್ಯೆ ತೀವ್ರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಮಧ್ಯಂತರ ತಡೆ ಆಜ್ಞೆ ತಂದಿದ್ದೇವೆ. ತಾಲೂಕಿನಲ್ಲಿ ಸಮಗ್ರ ನೀರಾವರಿಯಾಗಬೇಕು, ಸಾರ್ವಜನಿಕರು ಮತ್ತು ರೈತರು ತಮ್ಮನ್ನು ಮನಃಪೂರ್ವಕವಾಗಿ ಬೆಂಬಲಿಸಿದ್ದಾರೆ ಎಂದರು.
ಸಮಗ್ರ ಬದಲಾವಣೆ: ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ತಾಲೂಕಿನ ಅಭಿವೃದ್ದಿಗಾಗಿಯೇ ತಾವು ಸ್ಪರ್ಧಿಸಿರುವುದಾಗಿ  ತಾಲೂಕನ್ನು ಮಾದರಿಯನ್ನಾಗಿ, ತಾಲೂಕಿನಲ್ಲಿ ಸಮಗ್ರ ಬದಲಾವಣೆಗಾಗಿ ತಾವು ಸ್ಪರ್ಧಿಸಿರುವುದಾಗಿ ತಿಳಿಸಿದರು.
ವೀರಭದ್ರಪ್ಪ, ಮಲ್ಲಿಕಾರ್ಜುನಪ್ಪ, ಮಹೇಶ್ವರಪ್ಪ ಮತ್ತಿತರರು ಉಪಸ್ಥತರಿದ್ದರು.
--
ನಾಳೆ ಕಿಗ್ಗಾ ಋಷ್ಯ ಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಋಷ್ಯ ಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ ಬುಧವಾರ ನಡೆಯಲಿದೆ. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ನಡೆಯುತ್ತಿದ್ದು,ಬುಧವಾರ ಬೆಳಗ್ಗೆಯಂದಲೇ ಸ್ವಾಮಿಗೆ ಧಾರ್ಮಿಕ ಕಾರ್ಯ, ವಿಶೇಷ ಪೂಜೆ ನೆರವೇರಲಿದೆ. ನಂತರ ಮುಖ್ಯ ಬೀದಿಯಲ್ಲಿ ವೈಭವಯುತ ಮಹಾರಥೋತ್ಸವ ನಡೆಯಲಿದೆ. ಗುರುವಾರ ಓಕುಳಿ, ಸಂದಾನೋತ್ಸವ ನಡೆಯಲಿದ್ದು, ಒಂಬತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement