ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆದಾಯದ ಸ್ವಲ್ಪ ಭಾಗ ಸಮಾಜಕ್ಕೆ ವಿನಿಯೋಗಿಸಿ

Lingaraj Badiger
Updated On : 17 Apr 2013, 11:34 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.16
ಜೀವನದಲ್ಲಿ ಅಗತ್ಯತೆಗೆ ತಕ್ಕಂತೆ ವ್ಯಯ ಮಾಡಿ ಉಳಿದವನ್ನು ಸಮಾಜಮುಖಿ ಕೆಲಸಕ್ಕೆ ವಿನಿಯೋಗಿಸಿದರೆ ಸಾರ್ಥಕತೆ ಭಾವ ಪಡೆಯಬಹುದೆಂದು ಎಸ್‌ಬಿಎಂ ನಿವೃತ್ತ ಅಧಿಕಾರಿ ಟಿ.ಎಸ್. ವೆಂಕಟೇಶ್ ಹೇಳಿದ್ದಾರೆ.
ನಗರ ಹೊರವಲಯದ ಕದ್ರಿಮಿದ್ರಿಯಲ್ಲಿರುವ ಜೀವನಸಂಧ್ಯಾ ವೃದ್ದಾಶ್ರಮದಲ್ಲಿ 3.85 ಲಕ್ಷ ರು. ನೆರವು ನೀಡಿ ತಾವೇ ನಿರ್ಮಿಸಿದ್ದ ಆಶ್ರಯ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯರಾಗಿ ಸಮಾಜಕ್ಕೆ ಏನಾದರೂ ಅಳಿಲು ಸೇವೆ ಮಾಡಬೇಕೆಂಬ ತುಡಿತ ನನ್ನದು ಅದಕ್ಕೆ ಅವಕಾಶ ಒದಗಿ ಬಂದಿದೆ. ಭಗವಂತ ನೀಡಿರುವುದನ್ನು ಸಮಾಜಕ್ಕೆ ಒಂದುಪಾಲು ಕೊಡುತ್ತಿರುವುದಾಗಿ ತಿಳಿಸಿದ ಅವರು, ಅಗತ್ಯಕ್ಕೆ ಮೀರಿ ಖರ್ಚು ಮಾಡದೆ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಬೇಕೆಂದು ಹೇಳಿದರು.
ತಂದೆ ತಾಯಿಗಳು ಮಕ್ಕಳನ್ನು ಸಾಕಿ ಸಲಹಿದ ನಂತರ ತಮ್ಮ ಆಶ್ರಯದಾತರಾಗಿರುತ್ತಾರೆಂದು ಭಾವಿಸಿರುತ್ತಾರೆ. ವಿದ್ಯಾಭ್ಯಾಸ, ಉದ್ಯೋಗ ನೀಡಿ ನೆಲೆಕಲ್ಪಿಸಿದ ಪೋಷಕರಿಗೆ ಸಂದ್ಯಾಕಾಲದಲ್ಲಿ ನೆಲೆಯಿಲ್ಲದಂತೆ ಆಶ್ರಮ ಸೇರಬೇಕಾದ ಅನಿವಾರ್ಯತೆ ಶೋಚನೀಯ ಎಂದರು.
ಜೀವನಸಂಧ್ಯಾ ಅಧ್ಯಕ್ಷ ಎಂ.ಎಸ್. ಗುರುಮೂರ್ತಿ ಮಾತನಾಡಿ, ಹಣ ತರಬಹುದು, ಕಟ್ಟಡ ಕಟ್ಟಬಹುದು ಆದರೆ, ಆಶ್ರಮದ ನಿರ್ವಹಣೆ ತುಂಬಾ ಕಷ್ಟ. ಸರ್ಕಾರ ಕೇವಲ ತಲಾ 300 ರು. ನೀಡುತ್ತಿದೆ. ತಿಂಗಳ ಖರ್ಚು ಹೆಚ್ಚಾಗುತ್ತಿದೆ.
ಇದನ್ನರಿತ ಸುಮಾರು 400 ಕ್ಕೂ ಹೆಚ್ಚು ದಾನಿಗಳು ಒಂದು ದಿನದ ಊಟಕ್ಕೆ ದಾನದ ರೂಪದಲ್ಲಿ ಹಣ ನೀಡಿದ್ದಾರೆ. ವೃದ್ದಾಶ್ರಮಗಳು ದಾನಿಗಳ ನೆರವಿನಿಂದ ನಡೆಯಬೇಕಿದೆ ಎಂದು ಹೇಳಿದರು.
 ಕಾರ್ಯದರ್ಶಿ ಶಾಂತಿಲಾಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement