ಕವಾಲಿ ಕುಮಾರ್, ಬಸವರಾಜ್ ಕೆಜೆಪಿಗೆ
ತರೀಕೆರೆ: ಕೆಜೆಪಿ ಜಿಲ್ಲಾಧ್ಯಕ್ಷ, ಕ್ಷೇತ್ರದ ಅಭ್ಯರ್ಥಿ ಡಿ.ಎಸ್. ಸುರೇಶ್ ಸಮ್ಮುಖದಲ್ಲಿ ಅಪಾರ ಬೆಂಬಲಿಗರೊಡನೆ ಮುಖಂಡರಾದ ಕವಾಲಿ ಕುಮಾರ್, ಬಸವರಾಜ್ ಅವರು ಕೆಜೆಪಿಗೆ ಸೇರ್ಪಡೆಯಾದರು.
ಪಕ್ಷಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿ ಮಾತನಾಡಿದ ಡಿ.ಎಸ್. ಸುರೇಶ್, ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಮುಖಂಡರಾದ ಕವಾಲಿ ಕುಮಾರ್, ಬಸವರಾಜ್ ಮತ್ತು ಅವರ ಬೆಂಬಲಿಗರು ಸೇರ್ಪಡೆಯೊಂದಿಗೆ ಪಕ್ಷಕ್ಕೆ ಬಹು ದೊಡ್ಡ ಶಕ್ತಿ ಬಂದಿದೆ. ಪಕ್ಷದ ತೆಂಗಿನಕಾಯಿ ಗುರುತನ್ನು ಎಲ್ಲರಿಗೂ ಮನದಟ್ಟು ಮಾಡಬೇಕು, ಎಲ್ಲರೂ ಹೆಚ್ಚಿನ ಶ್ರಮದಿಂದ ಪಕ್ಷವನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಕವಾಲಿ ಕುಮಾರ್, ಟಿ.ಜಿ. ಮಂಜುನಾಥ್ ಅವರು ಮಾತನಾಡಿದರು.
ಮುಖಂಡರಾದ ಟಿ.ಎಸ್. ಯಶೋಧರಮೂರ್ತಿ, ಟಿ.ಎಸ್. ರಮೇಶ್, ಡಿ.ಆರ್. ಗುರುಮೂರ್ತಿ, ರಘು ಬನಪ್ಪ, ಡಿ. ಗೋವಿಂದಪ್ಪ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.