ಪಿಬಿಶ್ರೀ ನಿಧನಕ್ಕೆ ಸಂತಾಪ
ನರಸಿಂಹರಾಜಪುರ: ಗಾಯಕ ಪಿ.ಬಿ.ಶ್ರೀನಿವಾಸ್ ಅವರ ನಿಧನಕ್ಕೆ ಇಲ್ಲಿನ ಅಭಿನವ ಆರ್ಕೇಸ್ಟ್ರಾ ತಂಡದ ಕಲಾವಿದ ಅಭಿನವ ಗಿರಿರಾಜ್ ಶೋಕ ವ್ಯಕ್ತಪಡಿಸಿದ್ದಾರೆ.
ಗಾಯಕರಾಗಿ 6 ಭಾಷೆಗಳಲ್ಲಿ ಸಾಧನೆ ಮಾಡಿದ ಪಿ.ಬಿ. ಶ್ರೀನಿವಾಸ್ ಅವರ ನಿಧನದಿಂದ ಕಲಾವಿದರು ತಮ್ಮ ಕಲಾ ಕೊಂಡಿಯನ್ನು ಕಳೆದುಕೊಂಡಂತಾಗಿದೆ. ಪಿ.ಬಿ. ಶ್ರೀನಿವಾಸ್ ಅವರ ನೆನಪಿಗಾಗಿ ಅವರ ಗೀತೆಗಳ ಗೀತ ನಮನ ಗಾಯನ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.