ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೂವರೂ ಅಭ್ಯರ್ಥಿಗಳು ಕೋಟ್ಯಧಿಪತಿಗಳು

Lingaraj Badiger
Updated On : 17 Apr 2013, 10:56 am

ಕಪ್ರವಾರ್ತೆ,ಚಿಕ್ಕಮಗಳೂರು, ಏ.16
ಸಿ.ಟಿ. ರವಿ ಕೋಟ್ಯಧಿಪತಿ
ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಕೋಟ್ಯಧಿಪತಿ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಆಸ್ತಿ ವಿವರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
 ಅವರು 3,01,79,552 ಮೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ಹೊಂದಿದ್ದಾರೆ. ಅವರ ಪತ್ನಿ ಪಲ್ಲವಿ ರವಿ ಅವರ ಹೆಸರಿನಲ್ಲಿ 57,89,882 ಮೌಲ್ಯದ ಆಸ್ತಿ ಇದೆ. ರವಿ ಅವರು ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಒಟ್ಟು 96,80,719 ಸಾಲ ಪಡೆದಿದ್ದಾರೆ. ಅವರ ಪತ್ನಿಯ ಹೆಸರಿನಲ್ಲಿ 27,09,550 ಸಾಲ ಇದೆ. ಅವರ ಕೈಯಲ್ಲಿರುವ ನಗದು ಕೇವಲ 37,850 ಮಾತ್ರ.
ಕೆ.ಎಸ್. ಶಾಂತೇಗೌಡ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಅವರೂ ಕೋಟ್ಯಧಿಪತಿ.
 ಅವರು 6,42,82,543 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ 79,72,718 ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಾಂತೇಗೌಡರು ಕೋಟ್ಯಧಿಪತಿಯಾಗಿದ್ದರೂ ಸಾಲಗಾರರು. ಅವರು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 96,73,115 ಸಾಲವನ್ನು ಪಡೆದುಕೊಂಡಿದ್ದಾರೆ. ಗಾಯಿತ್ರಿ ಶಾಂತೇಗೌಡರು 36,54,150 ಸಾಲವನ್ನು ಪಡೆದುಕೊಂಡಿದ್ದಾರೆ. ಸದ್ಯ ಶಾಂತೇಗೌಡರ ಕೈಯಲ್ಲಿ 2,35,500, ಗಾಯಿತ್ರಿ ಶಾಂತೇಗೌಡ ಬಳಿ 1,75,800 ಇದೆ.
ಎಸ್.ಎಲ್. ಧರ್ಮೇಗೌಡ: ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರ ಹೆಸರಿನಲ್ಲಿರುವ ಚರಾಸ್ತಿಯ ಮೌಲ್ಯ 1,22,25,549, ಅವರ ಪತ್ನಿ ಎಂ. ಮಮತಾ ಅವರ ಹೆಸರಿನಲ್ಲಿ 41,30,832 ಮೌಲ್ಯದ ಆಸ್ತಿ ಇದೆ.
ಇದರ ಜತೆಗೆ ಸ್ವಯಾರ್ಜಿತವಾದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇದರ ಮೌಲ್ಯ 1,40,03,549, ಪತ್ನಿ ಹೆಸರಿನಲ್ಲಿ 16,000 ಆಸ್ತಿ ಇದೆ.
 ಧರ್ಮೇಗೌಡರು, ಬ್ಯಾಂಕ್ ಮತ್ತು  ಹಣಕಾಸು ಸಂಸ್ಥೆಗಳಿಂದ 26,00,703 ಸಾಲವನ್ನು ಪಡೆದಿದ್ದಾರೆ. ಪತ್ನಿ ಹೆಸರಿನಲ್ಲಿ 97,822 ಸಾಲವಿದೆ. ಸದ್ಯ ಧರ್ಮೇಗೌಡರ ಕೈಯಲ್ಲಿ 1,25,000 ಇದೆ. ಪತ್ನಿ ಮಮತಾ ಅವರ ಬಳಿ 75,000 ಇದೆ ಎಂದು ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement