'ರಾಜಕಾಣಿಗಳಿಗೆ ಜನಪರ ಚಿಂತನೆ ಇರಲಿ'
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.16
ರಾಜಕಾಣಿಗಳಿಗೆ ಜನಪರ ಚಿಂತನೆ, ಊರಿನ ಅಭಿವೃದ್ಧಿ ಬಗ್ಗೆ ಕಾಳಜಿ ಅಗತ್ಯ ಎಂದು ಸಂತ ಜೋಸೆಫರ ಪ್ರಧಾನ ದೇವಾಲಯದ ಧರ್ಮಗುರು ಜಾರ್ಜ್ ಡಿಸೋಜ ಹೇಳಿದ್ದಾರೆ.
ನಗರದ ಸಂತ ಜೋಸೆಫರ ಶಾಲೆ ರಸ್ತೆಯಲ್ಲಿರುವ ಪ್ರಧಾನ ದೇವಾಲಯಕ್ಕೆ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಆಶೀರ್ವದಿಸಿ ಮಾತನಾಡಿದರು.
ಎಸ್.ಎಲ್. ಧರ್ಮೇಗೌಡ ಮಾತನಾಡಿ, ತಮ್ಮಂತಹ ಧರ್ಮಗುರುಗಳ ಹಾರೈಕೆಯಿಂದ ನಿರ್ಗತಿಕರು ಮತ್ತು ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದು ನಮ್ಮ ತಂದೆಯವರು ಶಾಸಕರಾದಾಗಿನಿಂದಲೂ ನಡೆಸಿಕೊಂಡು ಬಂದಿದ್ದೇವೆ. ಕ್ಷೇತ್ರದ ಜನರು ಸೇವೆಗೆ ಅವಕಾಶ ಕಲ್ಪಿಸಿದರೆ ಅದನ್ನೇ ಮುಂದುವರೆಸುವುದಾಗಿ ತಿಳಿಸಿ ಇದಕ್ಕೆ ತಮ್ಮ ಆಶೀರ್ವಾದ ಅಗತ್ಯ ಎಂದರು.
ಅಂತಾರಾಷ್ಟ್ರೀಯ ಕ್ರೈಸ್ತ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಮೈಕೆಲ್ ಬ್ಯಾಪ್ಟಿಸ್ಟ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಗಿರೀಶ್, ಜಿಲ್ಲಾ ಕಾರ್ಯದರ್ಶಿ ರಮೇಶ್, ನಗರಾಧ್ಯಕ್ಷ ಜಯರಾಜ್ ಅರಸ್, ನಗರಸಭೆ ಸದಸ್ಯ ದಿನೇಶ್ ಹಾಜರಿದ್ದರು.