ರಾಮೋತ್ಸವ ಕಾರ್ಯಕ್ರಮ 19 ರಿಂದ
ನರಸಿಂಹರಾಜಪುರ: ಅಗ್ರಹಾರದ ರಾಮಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವ ಕಾರ್ಯಕ್ರಮ 19 ರಿಂದ 28 ರ ವರೆಗೆ ಉಮಾ ಮಹೇಶ್ವರ ಸಭಾಭವನದಲ್ಲಿ ನಡೆಯಲಿದೆ ಎಂದು ರಾಮ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ. ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಆದ್ಯಾತ್ಮ ರಾಮಾಯಣ ಪಾರಾಯಣ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 19 ರ ಸಂಜೆ ಶಿವಮೊಗ್ಗ ಕಸ್ತೂರ ಬಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಜಿ.ಎಸ್. ನಟೇಶ್ರಿಂದ ಮಂಕುತಿಮ್ಮನ ಕಗ್ಗ ಕುರಿತು ಉಪನ್ಯಾಸ, 20 ರಂದು ಅಗ್ರಹಾರದ ಲಲಿತ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ,ಶ್ರೀ ರಾಮ ಜನ್ಮೋತ್ಸವ, ಡೋಲೋತ್ಸವ, 21 ರಂದು ಸಂಜೆ ಸೀತಾ ಜನ್ಮೋತ್ಸವ, 24 ರಂದು ಸೀತಾರಾಮ ಕಲ್ಯಾಣೋತ್ಸವ, 25 ರಂದು ಸಂಜೆ ಸ್ಥಳೀಯ ಕಲಾವಿದರಿಂದ ಗೀತ ನೃತ್ಯ ಕಾರ್ಯಕ್ರಮ, 26 ರಂದು ಡಿಂಡೋಡಿ ನಟರಾಜ್ ಮತ್ತು ವೃಂದದವರಿಂದ ಶಾಸ್ತ್ರೀಯ ಸಂಗೀತ, 27 ರಂದು ರಾಜಬೀದಿ ಉತ್ಸವ, ಮಹಾ ಮಂಗಳಾರತಿ, 28 ರಂದು ಹನುಮೋತ್ಸವ ನಡೆಯಲಿದೆ.
ಇಂದು ಕಿಗ್ಗಾ ಮಹಾರಥೋತ್ಸವ
ಶೃಂಗೇರಿ: ಜಿಲ್ಲೆಯ ಪ್ರಸಿದ್ದಿ ಧಾರ್ಮಿಕ ಕ್ಷೇತ್ರ, ಮಲೆನಾಡಿನ ಮಳೆ ದೇವರು ಕಿಗ್ಗಾ ಶ್ರೀ ಋಷ್ಯ ಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ ಬುಧವಾರ ನಡೆಯಲಿದೆ. ರಥೋತ್ಸವಾಂಗ ಗುರುವಾರದಿಂದಲೇ ವಿವಿಧ ಧಾರ್ಮಿಕ ಕ್ರಿಯಾ ವಿಧಿವಿಧಾನಗಳು ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ಶ್ರೀ ಮನ್ಮಹಾರಥಾರೋಹಣ ನೆರವೇರಲಿದ್ದು ನಂತರ ಮಹಾರಥೋತ್ಸವ ಜರುಗಲಿದೆ. ಗುರುವಾರ ಶೈವಮಹಾಯಾಗದ ಪೂರ್ಣಾಹುತಿ ನಡೆಯಲಿದೆ.