ಜಿಲ್ಲೆಯಲ್ಲಿ ಕೊನೆದಿನ 62 ನಾಮಪತ್ರ
ಕ.ಪ. ವಾರ್ತೆ, ಚಿಕ್ಕಮಗಳೂರು, ಏ.17
ಮೇ 5 ರಂದು ನಡೆಯಲಿರುವ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಬುಧವಾರದಂದು 49 ಅಭ್ಯರ್ಥಿಗಳು 62 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೊನೆಯ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಆಗಮಿಸಿದ್ದರಿಂದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದವು.
ಚಿಕ್ಕಮಗಳೂರಿನಲ್ಲಿ ಕೆಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮೊದಲು ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ತೆರಳುವಾಗ ಹನುಮಂತಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಬುಧವಾರ ಸಂತೆ ದಿನವಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಯಿತು.
ಟ್ರಾಫಿಕ್ ಜಾಮ್: ತರೀಕೆರೆ ಪಟ್ಟಣದಲ್ಲಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿದ್ದರಿಂದ ಬಿ.ಎಚ್.ರಸ್ತೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಾಹನಗಳು ಗಂಟೆಗಟ್ಟಲು ಸ್ಥಳ ಬಿಟ್ಟು ಕದಲುವ ಪರಿಸ್ಥಿತಿ ಇರಲಿಲ್ಲ.
ನಾಮಪತ್ರ ಸಲ್ಲಿಸಿದವರ ವಿವರ.
ಚಿಕ್ಕಮಗಳೂರು
ಕೆಜೆಪಿಯಿಂದ ವೇದಮೂರ್ತಿ ಹಾಗೂ ಡಿ.ಎಸ್. ಅಶೋಕ್, ಬಿ.ಎಸ್.ಆರ್. ಪಕ್ಷದಿಂದ ಅಣ್ಣಾವೇಲು, ಜೆಡಿಯುಯಿಂದ ಹರೀಶ್, ಸಿಪಿಐ(ಎಂ.ಎಲ್.) ಉದ್ದಪ್ಪ, ನಿಂಗಯ್ಯ, ಲೋಕಸತ್ತಾ ದಳ ಪಾರ್ಟಿಯಿಂದ ಶಂಕರಲಿಂಗೇಗೌಡ, ಎನ್.ಸಿ.ಪಿ.ಯಿಂದ ಅಪ್ಸರ್ ಪಾಷ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಎಂ. ಸುಧೀರ್, ವಿಜಯಕುಮಾರ್, ಗುರುಶಾಂತಪ್ಪ, ಧರ್ಮೇಗೌಡ, ಅಪ್ಸರ್ ಪಾಷ.
ಕಡೂರು
ಭಾರತೀಯ ಜನತಾ ಪಕ್ಷದಿಂದ ಬೀರೂರು ದೇವರಾಜ್, ಕೆ.ಜೆ.ಪಿ.ಯಿಂದ ಬೆಳ್ಳಿ ಪ್ರಕಾಶ್, ಬಿ.ಎಸ್.ಆರ್.ನಿಂದ ಕೆಂಪರಾಜು, ಜೆಡಿಎಸ್‌ನಿಂದ ವೈ.ಎಸ್.ವಿ. ದತ್ತ, ವೆಲ್‌ಫೇರ್ ಪಾರ್ಟಿಯಿಂದ ಕುಮಾರ್ ನಾಯ್ಕ್, ಪಕ್ಷೇತರ ಅಭ್ಯರ್ಥಿಗಳಾಗಿ ಜನಾರ್ದನ್ ರಾವ್, ಗಂಗಾಧರ್, ನಾಗರಾಜು ಹಾಗೂ ಶಿವರುದ್ರಪ್ಪ.
ತರೀಕೆರೆ
ಕಾಂಗೆಸ್‌ನ ಜಿ.ಹೆಚ್. ಶ್ರೀನಿವಾಸ್, ಬಿ.ಎಸ್.ಆರ್. ಪಕ್ಷದಿಂದ ಕೆ. ಮಂಜುನಾಥ್, ಜೆಡಿಎಸ್‌ನ ಟಿ.ಆರ್. ನಾಗರಾಜ್, ಸರ್ವೋದಯ ಕರ್ನಾಟಕದಿಂದ ಡಿ.ಸಿ. ಸುರೇಶ್, ಕೆ.ಜೆ.ಪಿ.ಯಿಂದ ಡಿ.ಎಸ್. ಸುರೇಶ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅನುಸೂಯಾ, ಎ. ಸುರೇಶ್, ಬಿ. ತಿಮ್ಮಯ್ಯ, ವಿ. ಜಯರಾಂ, ಕಾಂತರಾಜು, ಪರಮೇಶ್ ನಾಯಕ್, ಹೆಚ್. ಓಂಕಾರಪ್ಪ, ಡಿ.ಆರ್. ನೀಲಕಂಠಪ್ಪ, ಟಿ.ಎಸ್. ಸುರೇಶ್, ಹೆಚ್.ಪಿ. ಅಶೋಕ್.
ಶೃಂಗೇರಿ
ಭಾರತೀಯ ಜನತಾ ಪಾರ್ಟಿಯಿಂದ ಡಿ.ಎನ್. ಜೀವರಾಜ್, ಬಿ.ಎಸ್.ಆರ್. ಪಕ್ಷದಿಂದ ಪೂರ್ಣೇಶ್, ಜೆ.ಡಿ.ಎಸ್‌ನಿಂದ ಟಿ.ಸಿ.ರಾಜೇಂದ್ರ, ಸಿಪಿಐ(ಎಂ.ಎಲ್.)(ರೆಡ್ ಸ್ಟಾರ್) ನಿಂದ ಉಮೇಶ್ ಹಾಗೂ ಬಸವರಾಜ್, ಪಕ್ಷೇತರ ಅಭ್ಯರ್ಥ್ಥಿಯಾಗಿ ಅಬ್ರಾಹಂ ಮತ್ತು ಕೆ.ವಿ. ಮಹೇಶ್.
ಮೂಡಿಗೆರೆ
ಭಾರತೀಯ ಜನತಾ ಪಾರ್ಟಿಯಿಂದ ಎಂ.ಪಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಬಿ.ಎನ್. ಚಂದ್ರಪ್ಪ, ಸಿ.ಪಿ.ಐ.ಯಿಂದ ಸಾತಿ ಸುಂದರೇಶ್, ಜೆಡಿಸ್ಯ್ನಿಂದ ಬಿ.ಬಿ. ನಿಂಗಯ್ಯ, ಬಿ.ಎಸ್.ಆರ್. ಪಕ್ಷದಿಂದ ಹೆಚ್. ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಬಿ.ಎಂ. ರಮೇಶ್ ನಾಮಪತ್ರ ಅವರು ಕೊನೆಯ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ಕೇಂದ್ರ ಚುನಾವಣಾ ವೀಕ್ಷಕರು
ಕೇಂದ್ರ ಚುನಾವಣಾ ಆಯೋಗವು ಚಿಕ್ಕಮಗಳೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರನ್ನು ನೇಮಿಸಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವೀಕ್ಷಕರಾಗಿ ಎಂ.ಎನ್. ನಗುಲ್ಲಿ (ಮೊಬೈಲ್ ಸಂಖ್ಯೆ 8762045710), ಅವರು ಕೊಪ್ಪ ಐ.ಬಿ.ಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರಾಗಿ ಎ. ಶೇಖರ್ ಬಾಬು, (8762045704) ಇವರು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವೀಕ್ಷಕರಾಗಿ ಬಾಲಕೃಷ್ಣ ಮೀನ, (8762045705) ಇವರು ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವೀಕ್ಷಕರಾಗಿ ಟಿ.ಎನ್. ವೆಂಕಟೇಶ್, (8762045706), ಇವರು ತರೀಕೆರೆ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ವೀಕ್ಷಕರಾಗಿ ಬಾದಲ್ ಚಟರ್ಜಿ (8762045708) ಇವರು ಕಡೂರು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ವೀಕ್ಷಕರು ಪ್ರತಿದಿನ ಕಚೇರಿ ಸಮಯದಲ್ಲಿ ಸಂಜೆ 4 ರಿಂದ 5ರವರೆಗೆ ಸಂಬಂಧಿಸಿದ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕ:ಕೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ.