ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಿಬಿಶ್ರೀಯವರಿಗೆ ಶ್ರದ್ಧಾಂಜಲಿ

Lingaraj Badiger
Updated On : 18 Apr 2013, 10:59 am

ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಆಗಲಿದ ಗಾನ ಗಾರುಡಿಗ ಡಾ.ಪಿ.ಬಿ. ಶ್ರೀನಿವಾಸರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
 ಮಕ್ಕಳ ತಜ್ಞ ಡಾ.ಜೆ.ಪಿ. ಕೃಷ್ಣೇಗೌಡ ಅವರು ಡಾ.ಪಿ.ಬಿ. ಶ್ರೀನಿವಾಸರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಭಿಮಾನಿಗಳಾದ ಎ.ಎನ್. ಮೂರ್ತಿ, ಕೆ.ಎಸ್. ಗುರುವೇಶ್, ಪಿ.ಸಿ. ರಾಜೇಗೌಡ, ಅನಿಲ್ ಕುಮಾರ್, ಗಿರಿಧರ್ ಯತೀಶ್, ಚಂದ್ರಮೌಳಿ ಮಾತನಾಡಿದರು.
 ಜಿಲ್ಲಾ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಂ. ಕುಮಾರ್ ಸ್ವಾಗತಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಖರ್ ಅಂಚನ್ ವಂದಿಸಿದರು. ಡಾ. ಪಿ.ಬಿ. ಶ್ರೀನಿವಾಸರವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವ್ಯಾಸಾಂಗಕ್ಕೆ ಅನುಮತಿ
ಶೃಂಗೇರಿ: ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ನಿರತ ಶಿಕ್ಷಕರಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರ ಅನುಮತಿ ಕಲ್ಪಿಸಿ ಆದೇಶ ಹೊರಡಿಸಿದೆ. ವಿಜ್ಞಾನ ಹಾಗೂ ಇತರೆ ಪದವಿ ಶಿಕ್ಷಣ ಪಡೆಯಲು ಅವಕಾಶವಿದೆ. ಉನ್ನತ ಶಿಕ್ಷಣ ಪಡೆಯಲು ಬಯಸುವ ಆಸಕ್ತ ಶಿಕ್ಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಒಟ್ಟು 12 ನಾಮಪತ್ರ
ಸೊರಬ: ಪ್ರಸಕ್ತ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ  ಬುಧವಾರ, ಬಿಎಸ್ಪಿಯಿಂದ ಗುಡ್ಡಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಕೆ. ಗುರುಮೂರ್ತಿ ಓಟೂರು, ಬಿಎಸ್ಪಿ ಬಂಡಾಯ ಅಭ್ಯರ್ಥಿ ಗುಡವಿ ಬಸವಣ್ಯಪ್ಪ, ಸಂಯುಕ್ತ ಜನತಾದಳದಿಂದ ಸತ್ಯನಾರಾಯಣ್, ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಭೀಮಪ್ಪ ನಾಮಪತ್ರ ಸಲ್ಲಿಸಿದರು.
 ಕೆಜೆಪಿ ಅಭ್ಯರ್ಥಿ ಹಾಲಪ್ಪ, ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ, ಬಾಸೂರು ಚಂದ್ರೇಗೌಡ, ಬಿ ಫಾರಂ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement