ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೈಭವಯುತ ಕಿಗ್ಗಾ ಮಹಾರಥೋತ್ಸವ

Lingaraj Badiger
Updated On : 18 Apr 2013, 10:58 am

ಶೃಂಗೇರಿ: ಪ್ರಕೃತಿಯ ಮಡಿಲು, ನಿಸರ್ಗದತ್ತ ರಮಣೀಯ ನರಸಿಂಹಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಮಲೆನಾಡಿನ ಮಳೆದೇವರು ಎಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಕಿಗ್ಗಾ ಶ್ರೀ ಶಾಂತಾ ಸಮೇತ ಋಷ್ಯ ಶೃಂಗೇಶ್ವರ ಸ್ವಾಮಿ ಮಹಾ ರಥೋತ್ಸವ ಬುಧವಾರ ವೈಭವಯುತವಾಗಿ ನಡೆಯಿತು.
 ರಥೋತ್ಸವಾಂಗ ಗುರುವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ರುದ್ರಾಭಿಷೇಕ ಸಮೇತ ವಿಶೇಷ ಪೂಜೆ,ಧಾರ್ಮಿಕ ಕ್ರಿಯಾವಿಧಿ ವಿಧಾನಗಳು ಜರುಗಿತು.ದೇವಾಲಯದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ, ಮಹಾಲಿಂಗೇಶ್ವರ, ಸುತ್ತಿನ ದೇವರು, ದ್ವಿಭುಜ ಗದಣಪತಿ, ದುರ್ಗಾಂಬಾ, ನಂದಿ ಮಂಟಪದಲ್ಲಿನ ದೇವರಿಗೆ ವಿಶೇಷ ಪೂಜೆ ನೆರವೇರಿತು.
 ಸುಡುಬಿಸಿಲ ವಾತಾವರಣದ ನಡುವೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಭಕ್ತ ಸಮೂಹದ ಸಮ್ಮುಖದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮಳೆ ದೇವರ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಬಾರದಂತೆ ವರುಣರಾಯ ಬಲುದೂರ ಉಳಿದಿದ್ದ. ರಥ ಸಾಗುವ ದಾರಿಯುದ್ದಕ್ಕೂ ರಸ್ತೆ ಶುಭ್ರಗೊಳಿಸಿ ರಂಗೋಲಿ ಚಿತ್ತಾರಗಳಿಂದ ಸಿಂಗರಿಸಲಾಗಿತ್ತು. ದಾರಿಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಕ್ತಾದಿಗಳು ಕೈಮುಗಿದು ಭಕ್ತಿ ಪುನೀತರಾಗಿ ಮಳೆರಾಯನನ್ನು ನಮಿಸುತ್ತಿದ್ದರು. ಉರು ಬಿಸಿಲ ವಾತಾವರಣದ ನಡುವೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
--
ಮಹಿಳಾ  ಸಂಘದಿಂದ ಶಾಲೆಗೆ ಕೊಡುಗೆ

ಚಿಕ್ಕಮಗಳೂರು: ಮಹಿಳಾ ಜಾಗೃತಿ ಸಂಘ ನಗರದ ಆಜಾದ್ ಪಾರ್ಕ್ ಸರ್ಕಾರಿ ಕನ್ನಡ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ಸುಮಾರು 8 ಸಾವಿರ ರು. ಬೆಲೆಯ ಡಿಜಿಟೆಲ್ ಕ್ಯಾಮೆರಾ ಹಾಗೂ ವಾಟರ್ ಫಿಲ್ಟರ್ ಕೊಡುಗೆ ನೀಡಲಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ವಿವಿಧ ತಂಡಗಳ ಮೂಲಕ ಶಾಲೆಯ ಮಕ್ಕಳಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುತ್ತಿದ್ದು, ಮಹಿಳೆಯರನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸುವ ಉದ್ದೇಶ ಇದೆ ಎಂದರು.
   ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್ ಮಾತನಾಡಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸಮುದಾಯದ ಸಹಭಾಗಿತ್ವದಿಂದ ಯಶಸ್ವಿ ಶಿಕ್ಷಣ ಸಾಧ್ಯ. ಮಹಿಳಾ ಜಾಗೃತಿ ಸಂಘ ಶಿಕ್ಷಣಕ್ಕೆ ಪೂರಕವಾದ ಕೊಡುಗೆ ನೀಡುತ್ತಿರುವುದು ಇತರೆ ಸಂಘಟನೆಗಳಿಗೆ ಮಾದರಿ ಎಂದು ಹೇಳಿದರು.
 ಮಹಿಳಾ ಜಾಗೃತಿ ಸಂಘದ ಸಹ ಕಾರ್ಯದರ್ಶಿ ಗೀತಾ ಸುಂದರೇಶ್, ನಿರ್ದೇಶಕ ಅಂಬುಜಾ ನಟರಾಜ್, ರೋಹಿಣಿ ವಿಶ್ವನಾಥ, ಲೀಲಾ ವಿಶ್ವೇಶ್ವರ್, ಸುಲೋಚನಾ ಶೇಖರ್, ವಿದ್ಯಾ ಪಟ್ಟಾಬಿ, ರೇಖಾ ಕೃಷ್ಣಮೂರ್ತಿ ತಂಡ ಶಾಲಗೆ ಕೊಡುಗೆ ನೀಡಿದೆ. ಶಾಲಾ ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement